– ಕರಣ್ ಶರ್ಮಾ, ಶಾರ್ದುಲ್ ಠಾಕೂರ್ ಬೌಲಿಂಗ್ ಮೋಡಿ
– ಡೆತ್ ಓವರಿನಲ್ಲಿ ಚೆನ್ನೈ ವೇಗಿಗಳ ಆರ್ಭಟ
ಅಬುಧಾಬಿ: ಇಂದು ನಡೆಯುತ್ತಿರುವ ಐಪಿಎಲ್-2020ಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 168 ರನ್‍ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ತಂಡ ಮೊದಲ ಹತ್ತು ಓವರಿನಲ್ಲಿ ಅದ್ಭುತವಾಗಿ ಆಡಿತು. ಸ್ಫೋಟಕ ಬ್ಯಾಟಿಂಗ್ ಮುಂದಾದ ಓಪನರ್ ರಾಹುಲ್ ತ್ರಿಪಾಠಿ ಸಿಕ್ಸ್ ಫೋರುಗಳ ಸುರಿಮಳೆಗೈದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕುಸಿದ ಕೋಲ್ಕತ್ತಾ ಮೊದಲ 10 ಓವರಿನಲ್ಲಿ 93 ರನ್ ಗಳಿಸಿದರು. ನಂತರ ಉತ್ತಮವಾಗಿ ಆಡಲಿಲ್ಲ. ಕೊನೆಯಲ್ಲಿ ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ ಮತ್ತು ಇಯೊನ್ ಮೊರ್ಗಾನ್ ಅವರ ವೈಫಲ್ಯ ತಂಡಕ್ಕೆ ಮುಳುವಾಗಿತು.
Advertisement
Two wickets in the final over for the birthday boy @DJBravo47. #Dream11IPL pic.twitter.com/ZMOER6qPaE
— IndianPremierLeague (@IPL) October 7, 2020
Advertisement
ಡೆತ್ ಓವರಿನಲ್ಲಿ ಚೆನ್ನೈ ಬೌಲರ್ಸ್ ಆರ್ಭಟ
ಮೊದಲಿನಲ್ಲಿ ಕೊಂಚ ದುಬಾರಿಯಾದರೂ ಡೆತ್ ಓವರ್ ಗಳಲ್ಲಿ ಚೆನ್ನೈ ತಂಡ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ನಾಲ್ಕು ಓವರ್ ಬೌಲ್ ಮಾಡಿ ಶಾರ್ದುಲ್ ಠಾಕೂರ್ ಅವರು 28 ರನ್ ನೀಡಿ ಎರಡು ವಿಕೆಟ್ ಗಬಳಿಸಿದರು. ಅಂತೆಯೇ ವೇಗಿಗಳಾದ ಸ್ಯಾಮ್ ಕರ್ರನ್ ಎರಡು ವಿಕೆಟ್ ಮತ್ತು ಡ್ವೇನ್ ಬ್ರಾವೋ ಮೂರು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಸ್ಪಿನ್ನರ್ ಕರಣ್ ಶರ್ಮಾ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಕೇವಲ 25 ರನ್ ನೀಡಿದರು.
Advertisement
He Karn do and will do. Absolutely delightful spell from the man. ???????????? #WhistlePodu #Yellove #WhistleFromHome #KKRvCSK pic.twitter.com/ceV6na0Muo
— Chennai Super Kings (@ChennaiIPL) October 7, 2020
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕರಾದ ಶುಭ್‍ಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಸಾಧಾರಣ ಆರಂಭ ನೀಡಿದರು. ಆದರೆ 11 ರನ್ ಗಳಿಸಿದ್ದ ಗಿಲ್ ಶಾರ್ದುಲ್ ಠಾಕೂರ್ ಅವರಿಗೆ ಔಟ್ ಆದರು. ನಂತರ ಜೊತೆಯಾದ ನಿತೀಶ್ ರಾಣಾ ಮತ್ತು ತ್ರಿಪಾಠಿ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ತಂಡ ಒಂದು ವಿಕೆಟ್ ಕಳೆದುಕೊಂಡು 52 ರನ್ ಸೇರಿಸಿತು.
The art of being Dhool! ???????????? #WhistlePodu #Yellove #WhistleFromHome #KKRvCSK pic.twitter.com/tudaAjKW1n
— Chennai Super Kings (@ChennaiIPL) October 7, 2020
ನಂತರ ತ್ರಿಪಾಠಿ ಮತ್ತು ರಾಣಾ ತಾಳ್ಮೆಯಿಂದ ಆಡುತ್ತಿದ್ದರು. ಆದರೆ 8ನೇ ಓವರಿನ ಮೊದಲನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಾಣಾ, ಕರಣ್ ಶರ್ಮಾ ಅವರ ಎಸೆತದಲ್ಲಿ ರವೀಂದ್ರ ಜಡೇಜಾ ಅವರು ಹಿಡಿದು ಉತ್ತಮ ಕ್ಯಾಚಿಗೆ ಬಲಿಯಾದರು. ಇದೇ ವೇಳೆ ಆರಂಭದಿಂದಲೂ ಉತ್ತಮವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿಯವರು 31 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು.
Rahul Tripathi's brilliant innings comes to an end as he departs after scoring 81 runs.#Dream11IPL #KKRvCSK pic.twitter.com/NYw1WNwPYC
— IndianPremierLeague (@IPL) October 7, 2020
ನಂತರ ಬ್ಯಾಟ್ ಟು ಬ್ಯಾಕ್ ಬೌಂಡರಿ ಸಿಡಿಸುತ್ತಿದ್ದ ಸುನಿಲ್ ನರೈನ್ ಅವರು ಫಾಫ್ ಡು ಪ್ಲೆಸಿಸ್ ಮತ್ತು ರವೀಂದ್ರ ಜಡೇಜಾ ಜೋಡಿ ಸೇರಿ ಹಿಡಿದು ಸೂಪರ್ ಕ್ಯಾಚಿಗೆ ಬಲಿಯಾದರು. 13ನೇ ಓವರಿನಲ್ಲಿ 7 ರನ್ ಸಿಡಿಸಿ ಆಡುತ್ತಿದ್ದ ಇಯೊನ್ ಮೋರ್ಗಾನ್ ಅವರು ಸ್ಯಾಮ್ ಕರ್ರನ್ ಅವರ ಎಸೆತದಲ್ಲಿ ಧೋನಿಯವರಿಗೆ ಕ್ಯಾಚ್ ನೀಡಿ ಹೊರನಡೆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ, ತ್ರಿಪಾಠಿಯವರು ಬಾಲನ್ನು ಬೌಂಡರಿಗೆ ಅಟ್ಟತ್ತಲೇ ಇದ್ದರು. ಪರಿಣಾಮ ಕೋಲ್ಕತ್ತಾ 15 ಓವರ್ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 128 ರನ್ ಕಲೆ ಹಾಕಿತು.
Jadeja catches, Faf completes!
The Jadeja-Faf tag team catch. Catching brilliance on display here. You cannot miss this.https://t.co/R5Xi2XhpMR #Dream11IPL
— IndianPremierLeague (@IPL) October 7, 2020
ನಂತರ ಸ್ಫೋಟಕ ಆಟಗಾರ ಆಂಡ್ರೆ ರಸ್ಸೆಲ್ ಅವರು 15ನೇ ಓವರಿನ ಮೊದಲ ಬಾಲಿನಲ್ಲಿ ಶಾರ್ದುಲ್ ಠಾಕೂರ್ ಅವರ ಬೌಲಿಂಗ್‍ನಲ್ಲಿ 2 ರನ್ ಗಳಿಸಿ ಕೀಪರ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆರಂಭದಿಂದಲೂ ಸೂಪರ್ ಆಗಿ ಬ್ಯಾಟ್ ಬೀಸಿದ ರಾಹುಲ್ ತ್ರಿಪಾಠಿ 51 ಬಾಲಿಗೆ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ 81 ರನ್ ಸಿಡಿಸಿ 16ನೇ ಓವರಿನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರು ಕೂಡ ಕ್ಯಾಚ್ ನೀಡಿದರು. ನಂತರ ಶಿವಂ ಮಾವಿಯವರ ಔಟ್ ಆದರು.