ಮುಂಬೈ: ಮುಂಬೈನ ನೈರುತ್ಯ ದಿಕ್ಕಿನಿಂದ 160 ಕಿ.ಮೀ ದೂರದಲ್ಲಿ ತೌಕ್ತೆ ಚಂಡಮಾರುತವು ಅಬ್ಬರಿಸುತ್ತಿದ್ದು, ಬೆಳಗ್ಗೆ 11 ರಿಂದ ಮಧ್ಯಾಹ್ನ 2ರವರೆಗೂ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ರಾತ್ರಿ 8 ಮತ್ತು 9 ಗಂಟೆಗೆ ತೌಕ್ತೆ ಚಂಡ ಮಾರುತವು ಗುಜರಾತ್ ಕರಾವಳಿ ತೀರವನ್ನು ತಲುಪುವ ಸಾಧ್ಯತೆಯಿದೆ. ಭೂಕುಸಿತದ ಭೀತಿಯಿಂದ ಗುಜರಾತ್‍ನ ಭಾವನಗರ್ ಜಿಲ್ಲೆಯ ಪೋರಬಂದರ್ ಮತ್ತು ಮಾಹುವಾ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ 25 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ತೌಕ್ತೆ ಚಂಡಮಾರುತದಿಂದ ಮುಂಬೈನ ಬಾಂದ್ರಾ-ವರ್ಲಿ ಸಮೀಪದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಂದು ಮುಂಜಾನೆಯಿಂದ ತೌಕ್ತೆ ಚಂಡಮಾರುತ ತೀವ್ರಗೊಳ್ಳುತ್ತಿದೆ.