ತೆಲುಗು ರಿಮೇಕ್ ಚಿತ್ರಕ್ಕಾಗಿ ಒಂದಾದ ಹರಿಪ್ರಿಯಾ, ದಿಗಂತ್

Public TV
1 Min Read
diganth haripriya

– ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಸಿನಿಮಾ

ಬೆಂಗಳೂರು: ತೆಲುಗಿನಿಂದ ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಸಿನಿಮಾವೊಂದರಲ್ಲಿ ನಟಿ ಹರಿಪ್ರಿಯಾ ಮತ್ತು ನಟ ದೂತ್‍ಪೇಡ ದಿಗಂತ್ ನಟಿಸಲಿದ್ದಾರೆ.

ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾದ ‘ಎವರು’ ಎಂಬ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದ್ದು, ಈ ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ದಿಗಂತ್ ಅವರು ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ.

evaru

ಈ ಸಿನಿಮಾ ತೆಲುಗಿನಲ್ಲಿ 2019ರಲ್ಲಿ ತೆರೆಕಂಡಿತ್ತು. ಅಲ್ಲಿ ನಟಿ ರೆಜಿನಾ ಕಸ್ಸಂದ್ರ ಮತ್ತು ನಟ ಅದ್ವಿ ಶೇಷ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹಿಟ್ ಆಗಲು ಈ ಇಬ್ಬರ ಅಭಿನಯವೂ ಕಾರಣವಾಗಿತ್ತು. ಈ ಸಿನಿಮಾವನ್ನು ತೆಲುಗಿನಲ್ಲಿ ಮಧು ಮೋಹನ್ ಅವರು ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ ರೆಜಿನಾ ಅವರ ಪಾತ್ರವನ್ನು ಹರಿಪ್ರಿಯಾ ಮಾಡಲಿದ್ದು, ಅದ್ವಿ ಶೇಷ್ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ಅಶೋಕ್ ಅಲ್ಲೆ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

hari priya

2020ರ ಆರಂಭದಲ್ಲೇ ಈ ಸಿನಿಮಾದ ಚಿತ್ರೀಕರಣ ಆರಂಭ ಮಾಡಲು ಸಿನಿಮಾ ತಂಡ ಯೋಜನೆ ರೂಪಿಸಿತ್ತು. ಆದರೆ ಅಷ್ಟರಲ್ಲಿ ಕೊರೊನಾ ಲಾಕ್‍ಡೌನ್ ಆದ ಕಾರಣ ಚಿತ್ರೀಕರಣ ಮಾಡುವ ಪ್ಲಾನ್ ಅನ್ನು ಕೈಬಿಡಲಾಗಿತ್ತು. ಈಗ ಮತ್ತೆ ಶೂಟಿಂಗ್ ಆರಂಭವಾಗಿದ್ದು, ಈಗಾಗಲೇ ಚಿತ್ರತಂಡ ಹೈದರಾಬಾದಿನಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಅಲ್ಲೇ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದೆ.

diganth

ಇಂಗ್ಲಿಷ್ ರಿಮೇಕ್ ಎವರು
ಎವರು ಸಿನಿಮಾ ಕೂಡ ಇಂಗ್ಲಿಷಿನ ‘ದಿ ಇನ್ವಿಸಿಬಲ್ ಗೆಸ್ಟ್’ ಎಂಬ ಸಿನಿಮಾದ ರಿಮೇಕ್ ಆಗಿದೆ. ಆದರೆ ಇದೇ ಸಿನಿಮಾದ ಕಥೆಯನ್ನು ನಿರ್ದೇಶಕ ಮಧು ಮೋಹನ್ ಅವರು ತೆಲಗು ಚಿತ್ರರಂಗಕ್ಕೆ ಇಲ್ಲಿನ ಪ್ರೇಕ್ಷಕರಿಗೆ ಬೇಕಾಗುವ ರೀತಿಯಲ್ಲಿ ಮಾರ್ಪಡು ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಥೆ ಬಹಳ ಸಸ್ಪೆನ್ಸ್ ಕ್ರಿಯೇಟ್ ಮಾಡುತ್ತೆ. ತಂದೆಯನ್ನು ಕೊಂದವರನ್ನು ಓರ್ವ ರೋಗಿಷ್ಟ ಮಗ ಕಂಡು ಹಿಡಿಯುವುದೇ ಈ ಸಿನಿಮಾದ ಮುಖ್ಯ ಕಥೆಯಾಗಿದೆ.

Evaru

Share This Article
Leave a Comment

Leave a Reply

Your email address will not be published. Required fields are marked *