ತೆರೆಯ ಮೇಲೆ ಬರಲಿದೆ ಪ್ರಧಾನಿ ಮೋದಿ ಬದುಕು, ಚಿಂತನೆ

Public TV
1 Min Read
ek aur naren 2

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಚಿಂತನೆ ಆಧಾರಿತ ಸಿನಿಮಾವೊಂದು ತಯಾರಿಯಾಗುತ್ತಿದೆ. ಈ ಸಿನಿಮಾಗೆ ನಿರ್ದೇಶಕ ಮಿಲನ್ ಭೌಮಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಮಹಾಭಾರತ ಸಿರಿಯಲ್‍ನಲ್ಲಿ ಅಭಿನಯಿಸಿ ಖ್ಯಾತಿ ಪಡೆದ ಗಜೇಂದ್ರ ಚೌಹಣ್ ಬಣ್ಣ ಹಚ್ಚಲಿದ್ದಾರೆ.

modi

ರಾಜಕೀಯ ರಂಗದಲ್ಲಿ ಹೊಸ ಅಲೆ ಮೂಡಿಸಿ ಎರಡು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನರೇಂದ್ರ ಮೋದಿಯವರು ಭಾರತ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೇ ವಿದೇಶಿ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಿವನ ಪರಮ ಭಕ್ತ ಎಂದೇ ಹೇಳುವ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾ ತೆರೆಯಲು ನಿರ್ದೇಶಕ ಮಿಲನ್ ಭೌಮಿಕ್ ಮುಂದಾಗಿದ್ದಾರೆ.

ek aur naren
ಸಿನಿಮಾ ಕುರಿಂತೆ ಮಾತನಾಡಿದ ನಿರ್ದೇಶಕ ಭೌಮಿಕ್, ಚಿತ್ರಕ್ಕೆ ಏಕ್ ಔರ್ ನರೇನ್ ಎಂಬ ಶೀರ್ಷಿಕೆ ಇಡಲಾಗಿದ್ದು, ಸಿನಿಮಾದಲ್ಲಿ ಎರಡು ಕಥಾ ಹಂದರವಿರಲಿದೆ. ಅಲ್ಲದೆ ಸಿನಿಮಾ ಎರಡು ರೀತಿಯ ವ್ಯಕ್ತಿತ್ವವನ್ನು ಹೊಂದಿರುವ ಕಥೆ ಆಧಾರಿಸಿರುತ್ತದೆ. ಒಂದು ಸ್ವಾಮಿ ವಿವೇಕಾನಂದರವರ ಜೀವನ ಸಾಧನೆ ಹೊಂದಿದ್ದರೆ ಮತ್ತೊಂದು ಮೋದಿಯವರ ಚಿಂತನೆ ಕುರಿತ ಕಥೆಯನ್ನು ಹೊಂದಿರುತ್ತದೆ ಎಂದಿದ್ದಾರೆ.

ಮಾರ್ಚ್ 12 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು. ಕೋಲ್ಕತ್ತಾ ಮತ್ತು ಗುಜರಾತ್‍ನಲ್ಲಿ ಚಿತ್ರೀಕರಿಸಲಾಗುತ್ತದೆ. ಏಪ್ರಿಲ್ ತಿಂಗಳಷ್ಟರಲ್ಲಿ ಸಿನಿಮಾ ಶೂಟಿಂಗ್ ಮುಕ್ತಾಯಗೊಳಿಸಿ, ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *