– ಅಪಘಾತವಾಗಿ ಕೆಲಸ ಕಳೆದುಕೊಂಡ ಪತಿ
ಲಕ್ನೋ: ಒಂದು ಹೊತ್ತಿನ್ನ ಊಟಕ್ಕೂ ಪರದಾಡುವಂತಹ ತೀವ್ರ ಬಡತನ ಎದುರಿಸುತ್ತಿದ್ದ ಬಡ ಮಹಿಳೆ, ಮಗಳ ದುಃಖದ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿ, ತನ್ನ 6 ವರ್ಷದ ಮಗಳನ್ನೇ ಕೊಲೆ ಮಾಡಿದ್ದಾಳೆ.
ಉತ್ತರ ಪ್ರದೇಶದ ಹ್ಯಾಂಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಭೆಸ್ಕಿಯಲ್ಲಿ ಘಟನೆ ನಡೆದಿದೆ. ಮಗಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿದೆ. ಮಗಳನ್ನು ಹೊರತು ಪಡಿಸಿ ಮಹಿಳೆಗೆ ಇನ್ನೂ ಇಬ್ಬರು ಮಕ್ಕಳಿದ್ದು, ಮಗಳ ಮುಂದಿನ ಜೀವನದ ಬಗ್ಗೆ ಚಿಂತಿಸಿ ಈ ಕೃತ್ಯ ಎಸಗಿದ್ದಾಳೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಮುಂದೆ ಕುಟುಂಬದಿಂದ ಅವಳ ವಿವಾಹವನ್ನು ಹೇಗೆ ಮಾಡುವುದು ಎಂದು ಯೋಚಿಸಿ ಕೊಲೆ ಮಾಡಿದ್ದಾಳೆ.
ಮಹಿಳೆಯನ್ನು ಉಷಾ ದೇವಿ ಎಂದು ಗುರುತಿಸಲಾಗಿದೆ. ಕುಟುಂಬವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಬಡತನವನ್ನು ಹೋಗಲಾಡಿಸಲು ಹೆಣಗಾಡುತ್ತಿದೆ. ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪತಿಗೆ ಅಪಘಾತವಾದ ಬಳಿಕ ಕೆಲಸ ಕಳೆದುಕೊಂಡಿದ್ದಾರೆ. ಬಳಿಕ 5 ಜನರ ಕುಟುಂಬವನ್ನು ಸಾಕುವ ಜವಾಬ್ದಾರಿ ಉಷಾ ದೇವಿ ಮೇಲೆ ಬಿದ್ದಿದೆ. ಅಲ್ಲದೆ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತುಂಬಾ ಶ್ರಮವಹಿಸಿ ಕೆಲಸ ಮಾಡಿದರೂ ಉಷಾ ದೇವಿ ಇಡೀ ಕುಟುಂಬಕ್ಕೆ ಆಹಾರ ವ್ಯವಸ್ಥೆ ಮಾಡುವುದು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಮಹಿಳೆ ತನ್ನ ಮಗಳನ್ನೇ ಕೊಲೆ ಮಾಡಿದ್ದಾಳೆ.