ಬೆಂಗಳೂರು: ಮಾಜಿ ಸಂಸದೆ, ನಟಿ ರಮ್ಯಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ತಮ್ಮ ಫೋಟೋ ಮತ್ತು ಪೋಸ್ಟ್ ಹಾಕುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ನಟಿ ರಾಧಿಕಾ ಪಂಡಿತ್ ಫೋಟೋಗೆ ರಮ್ಯಾ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹೊರಗಡೆ ದೇವರಿಲ್ಲ, ದೇವರು ನಮ್ಮ ಒಳಗಡೆಯೇ ಇದ್ದಾನೆ : ರಮ್ಯಾ
ರಾಧಿಕಾ ಪಂಡಿತ್ ಇಬ್ಬರು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದು, ಆಗಾಗ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಒಂದು ಫೋಟೋವನ್ನು ಶೇರ್ ಮಾಡಿದ್ದರು. ಇದೇ ಫೋಟೋಗೆ ನಟಿ ರಮ್ಯಾ ಕಮೆಂಟ್ ಮಾಡಿದ್ದಾರೆ.
https://www.instagram.com/p/CDf4VabAqj4/?igshid=y25tyi7crmyv
ರಾಧಿಕಾ ತಮ್ಮ ಫೋಟೋಗೆ ‘ನೀವು ನೀವಾಗಿರಿ ಯಾವಾಗಲೂ’ ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಈ ಫೋಟೋ ನೋಡಿದ ನಟಿ ರಮ್ಯಾ ಮೊದಲ ಬಾರಿಗೆ ರಾಧಿಕಾ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಧಿಕಾ ಫೋಟೋ ಲೈಕ್ ಮಾಡಿರುವ ರಮ್ಯಾ ‘ತುಂಬಾ ಮುದ್ದಾಗಿದ್ದೀಯ’ ಎಂದು ಕಾಮೆಂಟ್ ಮಾಡಿದ್ದಾರೆ. ರಮ್ಯಾ ಕಾಮೆಂಟ್‍ಗೆ ರಾಧಿಕಾ ಕೂಡ ಉತ್ತರ ನೀಡಿದ್ದು, ‘ನಿಮ್ಮಷ್ಟು ಮುದ್ದಾಗಿಲ್ಲ. ಯಾವಾಗಲು ನಿಮ್ಮನ್ನು ಆರಾಧಿಸುತ್ತೀನಿ’ ಎಂದು ಹೇಳಿದ್ದಾರೆ.
ಇದೀಗ ರಾಧಿಕಾ ಮತ್ತು ರಮ್ಯಾ ಚಾಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗ ರಮ್ಯಾ ಅವರು ರಾಮ ಮಂದಿರ ವಿಚಾರವಾಗಿ ಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
“ಹಿಂದೂಗಳು ಸಂತೋಷದಿಂದ ರಾಮ ಮಂದಿರ ನಿರ್ಮಾಣ ಮಾಡಲು ಮುಂದಾಗುತ್ತಿರುವುದನ್ನು ಕಂಡು ನನಗೆ ಸಂತಸವಿದೆ. ಮುಸ್ಲಿಮರು ಸಂತೋಷದಿಂದ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದನ್ನು ನೋಡಿ ನನಗೆ ಸಂತಸವಿದೆ. ಆದರೆ ಇಬ್ಬರೂ ಸಂತೋಷವಾಗಿರಲು ಅಥವಾ ದೇವರನ್ನು ಅರಿತುಕೊಳ್ಳಲು ದೇವಾಲಯ ಅಥವಾ ಮಸೀದಿ ಅಗತ್ಯವಿಲ್ಲ ಎಂದು ಅವರಿಗೆ ತಿಳಿದಾಗ ನನಗೆ ಹೆಚ್ಚು ಸಂತೋಷವಾಗುತ್ತದೆ. ನಿಜವಾದ ಸಂತೋಷ ಏಕತೆ/ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ” ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.