ಥೇಟ್ ಚಿರು ಮೂಗಿನಂತೆ ಮಗುವಿನ ಮೂಗಿದೆ: ಐಶ್ವರ್ಯಾ ಸರ್ಜಾ

Public TV
2 Min Read
aishwarya arjun

ಬೆಂಗಳೂರು: ಮೇಘನಾ ರಾಜ್ ಡೆಲಿವರಿ ಬಳಿಕ ಇದೀಗ ಅರ್ಜುನ್ ಸರ್ಜಾ ಕುಟುಂಬ ಆಸ್ಪತ್ರೆಗೆ ತೆರಳಿ ಜೂನಿಯರ್ ಚಿರುನನ್ನು ಕಣ್ತುಂಬಿಕೊಂಡು ಸಂತಸಪಟ್ಟಿದ್ದಾರೆ. ಇದೇ ವೇಳೆ ನಟಿ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮಾಧ್ಯಮಗಳ ಜೊತೆ ಮಗು ಬಗ್ಗೆ ಮಾತನಾಡಿದ್ದಾರೆ.

vlcsnap 2020 10 24 14h53m53s50

ಸುದ್ದಿಗಾರರೊಂದಿಗೆ ಮಾತನಾಡಿದ ಐಶ್ವರ್ಯಾ, ತುಂಬಾ ಕ್ಯೂಟ್ ಆಗಿದ್ದಾನೆ. ಸೇಮ್ ಚಿರು ತರಾನೇ ಇದಾನೆ. ಒಬ್ಬರಿಂದ ಇನ್ನೊಬ್ಬರಿಗೆ ಸ್ವಲ್ಪ ಬದಲಾವಣೆ ಇರಬಹುದು. ಆದರೆ ಮೂಗು ಮಾತ್ರ ಥೇಟ್ ಅವನ ತರಾನೇ ಇದೆ. ಈ ಅನುಭವವನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ತುಂಬಾ ಖುಷಿಯಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಚಿರು ನೆನಪು ಸಹ ಬರುತ್ತಿದೆ. ಆದರೆ ಅವನ ಆಶೀರ್ವಾದ ಯಾವಾಗಲೂ ಮಗು ಮೇಲೆ ಇರುತ್ತದೆ ಎಂದರು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

dhruva saraja 2

ಈ ಮಗು ತುಂಬಾ ಸ್ಪೆಷಲ್, ಯಾಕಂದ್ರೆ ನಮ್ಮ ಕಟುಂಬದ ಪ್ರೀತಿ ಒಂದುಕಡೆಯಾದರೆ. ಮತ್ತೊಂದು ಕಡೆ ಇಡೀ ಕರ್ನಾಟಕದ ಪ್ರೀತಿ, ಆಶೀರ್ವಾದ ಈ ಮಗು ಮೇಲಿದೆ. ತುಂಬಾನೇ ಖುಷಿಯಾಗುತ್ತದೆ. ಗಂಡು ಮಗುನೇ ಆಗುತ್ತೆ ಎಂದು ಎಲ್ಲರೂ ಗೆಸ್ ಮಾಡಿದ್ದೆವು. ಆದರೆ ನನಗೆ ಎಲ್ಲೋ ಒಂದು ಕಡೆ ಹೆಣ್ಣು ಮಗು ಆಗಬಹುದಾ ಎಂದು ಅನಿಸಿತ್ತು. ಮೇಘನಾ ತುಂಬಾ ಮುದ್ದಾಗಿ ಕಾಣಿಸುತ್ತಿದದ್ದರಿಂದ ಹಾಗೆ ಅನ್ನಿಸಿತ್ತು. ಆದರೆ ಯಾವುದೇ ಮಗುವಾದರೂ ನಮಗೆ ಖುಷಿ ಇತ್ತು. ಈಗ ಗಂಡು ಮಗುವಾಗಿದ್ದಕ್ಕೆ ಎಲ್ಲರಿಗೂ ಹೆಚ್ಚು ಸಂತಸವಾಗಿದೆ ಎಂದು ಐಶ್ವರ್ಯಾ ಹೇಳಿದ್ದಾರೆ.

dhruva saraja and prerana

ಇದೇ ವೇಳೆ ಅರ್ಜುನ್ ಸರ್ಜಾ ಪತ್ನಿ ಆಶಾ ರಾಣಿ ಮಾತನಾಡಿ, ತುಂಬಾ ಖುಷಿಯಾಗಿದೆ. ಹೃದಯಪೂರ್ವಕವಾಗಿ ಮಗುವನ್ನು ಸ್ವಾಗತಿಸಿದ್ದೇವೆ. ತಾಯಿ, ಮಗುವನ್ನು ದೇವರು ಚೆನ್ನಾಗಿ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಆದರೆ ಚಿರುನನ್ನು ಮಿಸ್ ಮಾಡುತ್ತೇವೆ. ಆ ಮಗುನಲ್ಲೇ ಚಿರುನನ್ನು ನೋಡುತ್ತೇವೆ. ಅಜ್ಜಿ ಆಗಿರೋ ಸಂಭ್ರಮ ಹೇಳೋಕೆ ಆಗಲ್ಲ ಎಂದು ಹೇಳಿದ್ದಾರೆ.

ಮೇಘನಾ ಅವರಿಗೆ ಹೆರಿಗೆಯಾದಾಗ ಅರ್ಜುನ್ ಸರ್ಜಾ ತಮಿಳುನಾಡಿನಲ್ಲಿದ್ದರು. ಹೀಗಾಗಿ ಬರಲು ಆಗಿರಲಿಲ್ಲ. ಇದೀಗ ಬೆಂಗಳೂರಿಗೆ ಆಗಮಿಸಿದ್ದು, ಈ ಹಿನ್ನೆಲೆ ಮೆಘನಾ ಹಾಗೂ ಜೂನಿಯರ್ ಚಿರುನನ್ನು ಕಣ್ತುಂಬಿಕೊಂಡು ಸಂತಸ ಪಟ್ಟಿದ್ದಾರೆ. ಕುಟುಂಬ ಸಮೇತರಾಗಿ ಆಸ್ಪತ್ರೆಗೆ ಆಗಮಿಸಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಮಗುವನ್ನು ಎತ್ತಿ ಮುದ್ದಾಡಿ ಸಂತಸ ಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *