ಸ್ಯಾಂಡಲ್ವುಡ್ನ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು ‘ಕಬ್ಜ’ ಚಿತ್ರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ನಟಿಸುತ್ತಿರುವ ಈ ಚಿತ್ರ ಏಳು ಭಾಷೆಯಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಕೆಲ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡಿವೆ.
ಏಳು ಭಾಷೆಯಲ್ಲಿ ಸಿನಿಮಾ ತೆರೆಗೆ ತರುವ ಸಾಹಸಕ್ಕೆ ಕೈಹಾಕಿರುವ ಆರ್.ಚಂದ್ರು ಈ ನಡುವೆ ಶೂಟಿಂಗ್‍ನಿಂದ ಕೊಂಚ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ನೀರಾವರಿ ಸಚಿವರಾದ ರಮೇಶ್ ಜಾರಕಿಹೊಳಿ, ರಾಮಚಂದ್ರೇಗೌಡ, ಲಕ್ಷ್ಮಿಪ್ರಸನ್ನ ಅವರ ಜೊತೆಗೂಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಿರ್ದೇಶಕ ಆರ್.ಚಂದ್ರು ಸಂತಸಪಟ್ಟಿದ್ದಾರೆ.
‘ಕಬ್ಜ’ ಆರ್.ಚಂದ್ರು, ರಿಯಲ್ ಸ್ಟಾರ್ ಉಪೇಂದ್ರ ಜೋಡಿಯ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ. ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಬ್ಜ ಚಿತ್ರದ ಮೇಲೆ ಇಡೀ ಭಾರತೀಯ ಚಿತ್ರರಂಗದಲ್ಲೇ ಅಪಾರ ನಿರೀಕ್ಷೆ ಮೂಡಿದೆ. ‘ಕಬ್ಜ’ ಮಾಸ್ ಹಾಗೂ ಆಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದ್ದು ಭೂಗತಲೋಕದ ಕಹಾನಿ ಚಿತ್ರದಲ್ಲಿದೆ. ಚಿತ್ರದಲ್ಲಿನ ಉಪೇಂದ್ರ ಅವರ ಲುಕ್ ಎಲ್ಲರಿಗೂ ಪ್ರಿಯವಾಗಿದ್ದು ಉಪ್ಪಿ ಅಭಿಮಾನಿಗಳು ಕೂಡ ಕಬ್ಜ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.
ಕಬೀರ್ ದುಹಾನಿ ಸಿಂಗ್, ಕೋಟ ಶ್ರೀನಿವಾಸ್ ರಾವ್, ಜಯಪ್ರಕಾಶ್, ಪ್ರಕಾಶ್‍ರಾಜ್, ಅವಿನಾಶ್, ಜಗಪತಿಬಾಬು ಒಳಗೊಂಡಂತೆ ಘಟಾನುಘಟಿ ಕಲಾವಿದರ ದಂಡು ಕಬ್ಜ ಚಿತ್ರದಲ್ಲಿದೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ‘ಕಬ್ಜ’ ಚಿತ್ರದ ಬ್ಯಾಕ್ ಗ್ರೌಂಡ್ ಸ್ಕೋರ್ ಹಾಗೂ ಹಾಡುಗಳು ಮೂಡಿಬರಲಿದೆ. ಎ.ಜೆ. ಶೆಟ್ಟಿ ಕ್ಯಾಮೆರಾ ಕೈಚಳಕದಲ್ಲಿ ಮೂಡಿಬರ್ತಿರೋ ಕಬ್ಜ ಚಿತ್ರಕ್ಕೆ ಆರ್.ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. ಕೊರೊನಾದಿಂದಾಗಿ ಶೂಟಿಂಗ್‍ಗೆ ಬ್ರೇಕ್ ಹಾಕಿದ್ದ ‘ಕಬ್ಜ’ ಟೀಂ ಇದೇ ತಿಂಗಳಿನಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ.