ಬೆಂಗಳೂರು: ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಈ ನಡುವೆ ಉಮಾಪತಿ ತಾನು ನಂಬುವ ದೇವರುಗಳ ಮೊರೆ ಹೋಗುತ್ತಿದ್ದಾರೆ. ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಈ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ.
ದರ್ಶನ್ ಹಾಗೂ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಆರಂಭವಾದ ದಿನದಿಂದ ಪ್ರಾರಂಭವಾದ ತಿಕ್ಕಾಟ ದಿನ ಕಳೆದಂತೆ ಬೇರೆ ಬೇರೆ ಮಜಲುಗಳನ್ನು ಪಡೆದುಕೊಂಡು ಹೋಗುತ್ತಿದೆ. ಇತ್ತ ನಿರ್ಮಾಪಕ ಉಮಾಪತಿ ಮಾತ್ರ ಒಂದಲ್ಲಾ ಒಂದು ದೇವರಗಳ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಬನಶಂಕರಿ ದೇವಿಯ ಮೊರೆಹೋದ ನಿರ್ಮಾಪಕ ಉಮಾಪತಿ
ಮೊದಲನೇದಾಗಿ ಉಮಾಪತಿ ಬನಶಂಕರಿಯಲ್ಲಿರುವ ಬನಶಂಕರಿ ತಾಯಿಯ ಮೊರೆ ಹೋಗಿ, ಬಶಂಕರಿ ತಾಯಿ ಬಳಿ ನನಗೆ ಬಂದಿರುವ ಕಷ್ಟಗಳನ್ನು ನಿವಾರಣೆ ಮಾಡುವಂತೆ ಬೇಡಿಕೊಂಡು ಬಂದಿದ್ದರು. ನಿನ್ನೆ ದಿಢೀರ್ ಎಂದು ಕುಟುಂಬದೊಂದಿಗೆ ತಿರುಪತಿಗೆ ಹೋಗಿ ಪ್ರಾರ್ಥನೆ ಮಾಡಿದ್ದಾರೆ.