ತುಮಕೂರು: ಕಳೆದ 40 ದಿನಗಳಿಂದ ಮಾದಲೂರು ಕೆರೆಗೆ ಹರಿಯುತ್ತಿದ್ದ ಹೇಮಾವತಿ ನದಿ ನೀರು ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದೆ.
ಶಿರಾ ಉಪಚುನಾವಣೆ ಮುಗಿದು ಭರ್ತಿ ಎರಡು ತಿಂಗಳಾಗಿದೆ ಅಷ್ಟೇ. ಫಲಿತಾಂಶ ಬಂದ ಮೂರು ವಾರಕ್ಕೆ ಬಿಜೆಪಿ ಸರ್ಕಾರ ಕೊಟ್ಟ ಭರವಸೆಯಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿತ್ತು. ಇದನ್ನು ಕಂಡ ಜನ ಮೆಚ್ಚುಗೆಯ ಮಹಾಪೂರವೇ ಹರಿಸಿದ್ರು. ಆದ್ರೇ ಕಳೆದ 2 ದಿನಗಳಿಂದ ಇದ್ದಕ್ಕಿದ್ದಂತೆ ಮದಲೂರು ಕೆರೆಗೆ ನೀರು ಹರಿಸುವುದನ್ನು ಬಂದ್ ಮಾಡಲಾಗಿದೆ.
Advertisement
Advertisement
2020 ನವೆಂಬರ್ 30 ರಿಂದ ಕಳ್ಳಂಬೆಳ್ಳ ಕೆರ ಮೂಲಕ ಮದಲೂರು ಕೆರೆಗೆ ನೀರು ಹರಿಸಲಾಗುತ್ತಿತ್ತು. ಆದರೆ ಜ.10ರ ಭಾನುವಾರದಿಂದ ಮದಲೂರು ಕೆರೆಗೆ ಹರಿಯುತ್ತಿದ್ದ ನೀರು ಏಕಾಏಕಿ ಬಂದ್ ಮಾಡಲಾಗಿದೆ. ಕರೆ ಭರ್ತಿ ಆಗದಿದ್ದರೂ ನೀರು ಹರಿಸುವುದನ್ನು ಸ್ಥಗಿತ ಮಾಡಿರುವುದಕ್ಕೆ ವ್ಯಾಪಕ ಆಕ್ರೊಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಸರ್ಕಾರವನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ