ಮಡಿಕೇರಿ: ಬಿಟ್ಟು ಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿ ಆರೋಗ್ಯ ಅಧಿಕಾರಿಗಳಿಗೂ ಬಹುದೊಡ್ಡ ಸವಾಲಾಗಿದೆ. ಜಿಲ್ಲೆಯ ತಾಲೂಕು ವೈದ್ಯಾಧಿಕಾರಿಗೂ ಕೊರೊನಾ ಪಾಸಿಟಿವ್ ದೃಢವಾಗಿದ್ದು, ವೈದ್ಯಾಧಿಕಾರಿಯ ವಾಹನ ಚಾಲಕನಿಗೂ ಸೋಂಕು ದೃಢವಾಗಿದೆ.
ಮೊನ್ನೆಯಷ್ಟೇ ತಾಲೂಕು ವೈದ್ಯಾಧಿಕಾರಿ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಕಚೇರಿಗೆ ಬಂದು ಡಿಎಚ್‍ಒ ಜೊತೆಗೆ ಚರ್ಚಿಸಿ ತಾಲೂಕಿನ ಅಂಕಿ ಅಂಶಗಳನ್ನು ನೀಡಿದ್ದರು. ಆರೋಗ್ಯ ಇಲಾಖೆಯ ಹಲವು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಇಂದು ಬೆಳಿಗ್ಗೆ ಎಲ್ಲರ ವರದಿ ಬಂದಿದ್ದು, ತಾಲೂಕು ವೈದ್ಯಾಧಿಕಾರಿ ಮತ್ತು ಅವರ ಚಾಲಕನಿಗೆ ಸೋಂಕು ಇರುವುದು ಖಚಿತವಾಗಿದೆ.
ಪಾಸಿಟಿವ್ ವರದಿ ಆಗಮಿಸುತ್ತಿದಂತೆ ಡಿಎಚ್‍ಒ ಕಚೇರಿಯಲ್ಲೂ ಆತಂಕ ಎದುರಾಗಿತ್ತು. ಆರೋಗ್ಯ ಅಧಿಕಾರಿ ಕಚೇರಿಯಲೆಲ್ಲಾ ಓಡಾಡಿರುವುದರಿಂದ ಇಂದು ಎಲ್ಲಾ ಸಿಬ್ಬಂದಿಗಳನ್ನು ಮನೆ ಕಳುಹಿಸಿ ಕಚೇರಿ ಸ್ಯಾನಿಟೈಸ್ ಮಾಡಲಾಗಿದೆ. ಡಿಎಚ್‍ಒ ಕಚೇರಿಯಲ್ಲಿ ಬರೋಬ್ಬರಿ 100 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರೆಲ್ಲರಿಗೂ ಈಗ ಆತಂಕ ಎದುರಾಗಿದೆ. ಸದ್ಯ ಡಿಎಚ್‍ಒ ಅವರು ಸ್ವತಃ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.