ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ

Public TV
2 Min Read
afghanistan taliban

– ಮನೆಗಳನ್ನು ಹೊಕ್ಕು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಕೃತಿ
– ಅಫ್ಘಾನಿಸ್ತಾನದ ಮೂರನೇ ಎರಡರಷ್ಟು ಭಾಗ ತಾಲಿಬಾನಿಗಳ ವಶ

ಕಾಬುಲ್: ತಾಲಿಬಾನಿಗಳ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನದಲ್ಲಿ ರಕ್ಕಸದೃಶ್ಯ ವಾತಾವರಣ ನಿರ್ಮಾಣವಾಗಿದ್ದು, 12 ರಿಂದ 45 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಬಲವಂತವಾಗಿ ವಿವಾಹವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ವಶಪಡಿಸಿಕೊಂಡಿದ್ದಾರೆ. ಅಂದರೆ ಅಫ್ಘಾನಿಸ್ತಾನದ ಮೂರನೇ ಎರಡರಷ್ಟು ಭಾಗ ತಾಲಿಬಾನಿಗಳ ಹಿಡಿತದಲ್ಲಿದೆ. ಇಲ್ಲಿನ ಜನ ಪ್ರಾಣ ರಕ್ಷಣೆಗಾಗಿ ಪರಿತಪಿಸುತ್ತಿದ್ದಾರೆ.

afghan taliban 3

ಉಗ್ರರ ದಾಳಿಯಿಂದಾಗಿ ಅಫ್ಘಾನಿಸ್ತಾನದ ಹೆರಾತ್‍ನಲ್ಲಿ ಸರ್ಕಾರಿ ಅಧಿಕಾರಿಗಳೇ ಶರಣಾಗಿದ್ದಾರೆ. ಹೆರಾತ್ ಪ್ರಾಂತ್ಯದ ಸರ್ಕಾರಿ ಅಧಿಕಾರಿಗಳು, ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಮಾಜಿ ಮುಜಾಹಿದ್ದೀನ್ ನಾಯಕ ಮೊಹಮ್ಮದ್ ಇಸ್ಮಾಯಿಲ್ ಖಾನ್, ಆಂತರಿಕ ಭದ್ರತೆಯ ಉಪಮಂತ್ರಿ ಮತ್ತು 207 ಜಾಫರ್ ಕಾಪ್ರ್ಸ್ ಕಮಾಂಡರ್ ಗಳು ತಾಲಿಬಾಗ್ ಉಗ್ರರಿಗೆ ಶರಣಾಗಿದ್ದಾರೆ.

ನಿನ್ನೆಯಷ್ಟೇ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್ ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರಿಂದಾಗಿ ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳ ಪೈಕಿ 12 ರಾಜಧಾನಿಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಂತಾಗಿದೆ.

ತಾಲಿಬಾನಿಗಳು ವಶಕ್ಕೆ ಪಡೆದ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿ ಋತುಮತಿಯರಾದ ಹಾಗೂ 45 ವರ್ಷದೊಳಗಿನ ಯುವತಿಯರು ಹಾಗೂ ಮಹಿಳೆಯರನ್ನು ಎಳೆದು ತರುತ್ತಿದ್ದು, ಬಲವಂತವಾಗಿ ವಿವಾಹವಾಗಿ, ಲೈಂಗಿಕ ಸೇವಕಿಯರನ್ನಾಗಿ ಮಾಡಿಕೊಂಡಿದ್ದಾರೆ. ಉಗ್ರರ ವಶದಲ್ಲಿರುವ ಮಹಿಳೆಯರು ಪ್ರಾಣ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ, ಅಂಗಲಾಚುತ್ತಿದ್ದಾರೆ ಎಂದು ವರದಿಯಾಗಿದೆ.

Map shows areas controlled by Taliban. AP

ಈಗಾಗಲೇ ತಾಲಿಬಾನಿಗಳು ಮಹಿಳೆಯರ ಮೇಲೆ ಇಸ್ಲಾಮಿಕ್ ಕಠಿಣ ನಿರ್ಬಂಧಗಳನ್ನು ಹೇರಲು ಆರಂಭಿಸಿದ್ದು, ಹಿಂಸಾಚಾರ ನಡೆಸಿ, ಮಹಿಳೆಯರನ್ನು ಕೊಲೆ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಿಗೆ ನುಗ್ಗಿ ಪ್ರತಿ ಮನೆಯನ್ನು ತಡಕಾಡಿ ಮಹಿಳೆಯರನ್ನು ಹಾಗೂ ಅಪ್ರಾಪ್ತೆಯರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನದಲ್ಲಿ ನೆತ್ತರು ಹರಿಸುತ್ತಿದ್ದಾರೆ.

ಈ ಹಿಂದೆ ಅಮೆರಿಕ ಸರ್ಕಾರ ಆಫ್ಘಾನಿಸ್ತಾನದಲ್ಲಿನ ತನ್ನ ಕೊನೆಯ ಸೈನಿಕ ತುಕಡಿಯನ್ನು ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳು ಮತ್ತೆ ಅಟ್ಟಹಾಸ ಆರಂಭಿಸಿ, ಕೇವಲ 15 ದಿನಗಳ ಅಂತರದಲ್ಲಿ ತಾವು ಈ ಹಿಂದೆ ಹಿಡಿತ ಕಳೆದುಕೊಂಡಿದ್ದ ಪ್ರದೇಶಗಳ ಪೈಕಿ ಶೇ.50ಕ್ಕೂ ಹೆಚ್ಚು ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡಿದೆ. ಈ ಮೂಲಕ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *