ಹೈದರಾಬಾದ್: ಹೆತ್ತವರ ಆಶೀರ್ವಾದೊಂದಿಗೆ ಹೊಸ ಜೀವನಕ್ಕೆ ಕಾಲಿಡಬೇಕೆಂದು ವಿದೇಶದಿಂದ ಭಾರತಕ್ಕೆ ಬಂದಿದ್ದ ಮಗ, ತಾಯಿಯ ಶವ ಮುಂದಿಟ್ಟುಕೊಂಡು ಪತ್ನಿಯ ಕೊರಳಿಗೆ ತಾಳಿ ಕಟ್ಟಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್ಪೇಟ್ನಲ್ಲಿ ನಡೆದಿದೆ.
Advertisement
ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್‍ಗೆ ಮೇ 21ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆಂದು ಆತ ತನ್ನೂರಿಗೆ ಮರಳಿದ್ದ. ಆದರೆ ಇವರ ತಾಯಿ ಪಾಲ್ಪಾನೂರಿ ರೇಣುಕಾ (49) ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ರೇಣುಕಾ ಅವರ ಸಹೋದರನೂ ಕೂಡ ಕೋವಿಡ್‍ನಿಂದ ಬಲಿಯಾಗಿದ್ದರು. ಹೀಗಾಗಿ ರಾಕೇಶ್ ತನ್ನ ವಿವಾಹವನ್ನು ಮುಂದೂಡಿ, ಅಮ್ಮ ಗುಣಮುಖರಾಗಿ ಕ್ಷೇಮವಾಗಿ ಮನೆಗೆ ಬರಲೆಂದು ಕಾಯುತ್ತಿದ್ದ. ಇದನ್ನೂ ಓದಿ: ಸೇತುವೆ ಮೇಲೆ ನಡೆಯಿತು ವಿಶೇಷ ಮದುವೆ
Advertisement
Advertisement
ಆದರೆ ತಾಯಿ ಅವರೂ ಕೂಡಾ ಕೊರಾನಾದಿಂದ ಸಾವನ್ನಪ್ಪಿದರು. ಬಳಿಕ ಆಸ್ಪತ್ರೆಯಿಂದ ಗ್ರಾಮಕ್ಕೆ ಮೃತದೇಹವನ್ನು ಕರೆತರಲಾಯಿತು. ಈ ವೇಳೆ, ಅಮ್ಮನ ಮೃತದೇಹದ ಮುಂದೆಯೇ ಭಾರವಾದ ಮನಸ್ಸು, ದು:ಖದ ಮಡುವಿನಲ್ಲೇ ರಾಕೇಶ್ ಹಾಗೂ ವಧು ಪರಸ್ಪರ ಹಾರ ಬದಲಾಯಿಸಿಕೊಂಡರು. ಈ ಮೂಲಕ ತೀರಿಹೋದ ಅಮ್ಮನ ಶವದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮನಕಲಕುವ ಘಟನೆಗೆ ಸಾಕ್ಷಿಯಾಗಿ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡವು. ಅಮ್ಮನ ಸಮ್ಮುಖದಲ್ಲಿಯೇ ಮದುವೆಯಾಗ ಬೇಕು ಎಂದು ಆಸೆ ಇಟ್ಟುಕೊಂಡಿದ್ದ ರಾಕೇಶ್
Advertisement