ತುಮಕೂರು: ಕೊರೊನಾ ರುದ್ರ ನರ್ತನವಾಡುತ್ತಿದೆ. ನತದೃಷ್ಟ ತಾಯಿ ಮತ್ತು ಮಗ ಇಬ್ಬರೂ ಕೋವಿಡ್‍ಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಹಂತ ಹಂತವಾಗಿ ಅನ್‍ಲಾಕ್ – ಯಾವ ಸೇವೆ ಯಾವಾಗ ಆರಂಭ?
ಚಿಕ್ಕಮ್ಮ(65), ಮಗ ಕುಮಾರಸ್ವಾಮಿ (43) ಮಹಾಮಾರಿಗೆ ಬಲಿಯಾಗಿದ್ದಾರೆ. ಮೃತರು ತುಮಕೂರು ತಾಲ್ಲೂಕಿನ ಚಿಕ್ಕಕೊರಟಗೆರೆ ಗ್ರಾಮದ ನಿವಾಸಿಗಳಾಗಿದ್ದಾರೆ. ತಾಯಿ ಮಗ ಇಬ್ಬರು ಕೊರೊನಾ ಸೊಂಕಿನಿಂದ ಬಳಲುತ್ತಿದ್ದರು. ಇದನ್ನೂ ಓದಿ: ತಾಯಿಗೆ ಕೊರೊನಾ ಬಂತೆಂದು ಕೆನಡಾದಿಂದ ಬಂದ ಮಗನೂ ಮಹಾಮಾರಿಗೆ ಬಲಿ
ಮೇ 18 ರಂದು ತಾಯಿ ಚಿಕ್ಕಮ್ಮ ಅಸುನೀಗಿದ್ದರೆ, ಇಂದು ಮಗ ಕುಮಾರಸ್ವಾಮಿ ಸಾವನಪ್ಪಿದ್ದಾನೆ. ಕುಮಾರಸ್ವಾಮಿ ಜಿಲ್ಲೆಯ ಪ್ರಸಿದ್ದ ಕೆಂಪಮ್ಮ ದೇವಿ ದೇವಸ್ಥಾನದ ಅರ್ಚಕನಾಗಿದ್ದ ಎಂದು ತಿಳಿದು ಬಂದಿದೆ. ತಾಯಿ ಮಗ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಹಿಂದೆ ಹಾವೇರಿ, ಶಿವಮೊಗ್ಗ, ಬೀದರ್‌ನಲ್ಲಿ ತಾಯಿ, ಮಗ ಇಬ್ಬರೂ ಒಟ್ಟಿಗೆ ಕೊರೊನಾಗೆ ಬಲಿಯಾಗಿರುವ ಘಟನೆ ನಡೆದಿದೆ. ಇದನ್ನೂ ಓದಿ: ಗಂಟೆಗಳ ಅಂತರದಲ್ಲಿ ತಾಯಿ, ಮಗ ಇಬ್ಬರೂ ಕೊರೊನಾಗೆ ಬಲಿ
ಭಾರತದಲ್ಲಿ ಕಳೆದ 19 ದಿನಗಳಿಂದ ಸೋಂಕು ಇಳಿಮುಖವಾಗುತ್ತಿದ್ದು, ಮಂಗಳವಾರ 1,27,510 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 51 ದಿನಗಳ ಕನಿಷ್ಠ ಸಂಖ್ಯೆಯಾಗಿದೆ. ಈ ಅವಧಿಯಲ್ಲಿ 2,795 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,81,75,044ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,31,895ಕ್ಕೆ ತಲುಪಿದೆ. ಇದನ್ನೂ ಓದಿ: ಮಾಸ್ಕ್ ವಿಚಾರಕ್ಕೆ ಕಿರಿಕ್ – ದೊಣ್ಣೆಯಿಂದ ಮಹಿಳೆಗೆ ಬಡಿದ ಯುವತಿ
ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18,95,520ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 2,55,287 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,59,47,629ಕ್ಕೆ ತಲುಪಿದೆ.