ತಾಯಿ ಪುಣ್ಯಾತಗಿತ್ತಿ ಸುಮ್ಮನಿರು: ಸಂಬರಗಿ

Public TV
2 Min Read
nidhi 7

ಪ್ರಶಾಂತ್ ಸಂಬರಗಿ ಮತ್ತೆ ಮೊದಲಿನಂತೆ ಎಲ್ಲರ ಜೊತೆ ಜಗಳ ಮಾಡಲು ಪ್ರಾರಂಭಿಸಿದ್ದಾರೆ. ಮೊಟ್ಟೆ ತಿಂದಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ನಿಧಿ ಸುಬ್ಬಯ್ಯ ಅವರ ಚರಿತ್ರೆ ಹೇಳ್ತೀನಿ ಎಂದು ಸಂಬರಗಿ ನಿಧಿಗೆ ಕಣ್ಣೀರು ಹಾಕಿಸಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ನಿಧಿ ಮತ್ತೆ ಪ್ರಶಾಂತ್ ಸಂಬರಗಿ ನಡುವೆ ಜಗಳ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಪ್ರಶಾಂತ್ ಮಾತನಾಡುತ್ತಿದ್ದಾರೆ.

bigg boss 20

 ಪ್ರಶಾಂತ್ ಸಂಬರಗಿ ಅವರು ಎರಡು ಮೊಟ್ಟೆ ತಿಂದರು ಎಂದು ಜಗಳ ಶುರುವಾಗಿದೆ. ನಿಧಿ ಸುಬ್ಬಯ್ಯ ಅವರು ಪ್ರಶಾಂತ್ ಸಂಬರಗಿ ಮೊಟ್ಟೆ ತಿನ್ನೋದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ. ಆಗ ಅರವಿಂದ್, ದಿವ್ಯಾ ಉರುಡುಗ ಕೂಡ ನಿಧಿಗೆ ಬೆಂಬಲ ಸೂಚಿಸಿದ್ದಾರೆ. ನಾನು ಹೆಚ್ಚು ಮೊಟ್ಟೆ ತಿಂದಿಲ್ಲ ಎಂದು ಪ್ರಶಾಂತ್ ಸಂಬರಗಿ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಪುಣ್ಯಾತಗಿತ್ತಿ, ಸುಮ್ಮನಿರಮ್ಮ, ನಿನ್ನ ಚರಿತ್ರೆ ಗೊತ್ತಿದೆ, ನಿನ್ನ ಸಂಸ್ಕøತಿ ಗೊತ್ತಿದೆ, ಹೇಳಬೇಕಾ ಹೇಳು ಹೇಳುತ್ತೇನೆ ಎಂದು ಪ್ರಶಾಂತ್ ಅವರು ನಿಧಿ ಸುಬ್ಬಯ್ಯಗೆ ಬೆದರಿಕೆ ಹಾಕಿದ್ದಾರೆ.

ಮೊಟ್ಟೆ ಕಳ್ಳ ಅಂತ ಮಾಡಬೇಡಿ, ನೀವೆಲ್ಲ ಹಾಲಿನಲ್ಲಿ ಸ್ನಾನ ಮಾಡಿಕೊಂಡು ಬಂದವರು ಪರಿಶುದ್ಧರು ಅಂತ ಪ್ರಶಾಂತ್ಅವರು ನಿಧಿ ಸುಬ್ಬಯ್ಯ, ದಿವ್ಯಾ ಉರುಡುಗ ಅವರನ್ನು ವ್ಯಂಗ್ಯ ಮಾಡಿಕೊಂಡಿದ್ದಾರೆ. ಸಣ್ಣತನವನ್ನು ತೋರಿಸುತ್ತಿದ್ದೀರಾ. ಮನೆಮಂದಿಗೆ ಜೊತೆಗೆ ವಾಗ್ವಾದ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ವಾರಗಳ ಕಾಲ ಸೈಲೆಂಟ್ ಆಗಿದ್ದ ಪ್ರಶಾಂತ್ ಸಂಬರಗಿ ಮತ್ತೆ ಮಾತಿನ ವರಸೆಯನ್ನು ಶುರು ಮಾಡಿಕೊಂಡಿದ್ದಾರೆ.

 ಮೊಟ್ಟೆ ತಿಂದರು ಎಂಬ ಆರೋಪ ಬಂದಿದ್ದಕ್ಕೆ ಪ್ರಶಾಂತ್ ಸಂಬರಗಿ ಅವರು ಎಲ್ಲ ಹೆಸರನ್ನು ತಗೊಂಡು ಜಗಳ ಆಡಿದ್ದಾರೆ. ರಾಜೀವ್, ನಿಧಿ ಸುಬ್ಬಯ್ಯ, ಮಂಜು ಪಾವಗಡ, ರಘು ಅವರ ಹತ್ತಿರ ಕೂಡ ಸಂಬರಗಿ ಜಗಳ ಆಡಿಕೊಂಡಿದ್ದರು. ಇನ್ನು ವೈಯಕ್ತಿಕ ವಿಷಯ ತಗೊಂಡು ಜಗಳ ಆಡಿದ್ದರು. ನಿಧಿ ಅವರು ಪ್ರಶಾಂತ್‍ಗೆ ಚೀಪ್ ಎಂದಿದ್ದಾರೆ, ಅದಕ್ಕೆ ಸಂಬರಗಿ ಅವರು ನಿಧಿಗೆ ನಿನ್ನ ಚರಿತ್ರೆ ಹೇಳಲಾ? ಅಂತ ಕೇಳಿದ್ದಾರೆ. ಆಗ ಮನೆ ಮಂದಿ ಪ್ರಶಾಂತ್ ಅವರಿಗೆ ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಪ್ರಶಾಂತ್ ಮಾತ್ರ ತಮ್ಮದೇ ಆಗಿರುವ ವಾದವನ್ನು ಮಾಡಿದ್ದಾರೆ. ಪ್ರಶಾಂತ್ ವೈಯಕ್ತಿಕ ವಿಚಾರ ತೆಗೆದರು ಎಂದು ಉಳಿದ ಸ್ಪರ್ಧಿಗಳು ಅವರ ಮೇಲೆ ಬೇಸರ ಮಾಡಿಕೊಂಡಿದ್ದಾರೆ.

ದಿನನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಜಗಳ ಆಡುತ್ತಿರುತ್ತಾರೆ. ಊಟ-ತಿಂಡಿ ವಿಚಾರದಲ್ಲಿಯೂ ವಾದ ವಿವಾದ ಆಗುತ್ತಿದೆ. ಯಾರು ಹೆಚ್ಚು ತಿಂದರು ಯಾರು ಕಡಿಮೆ ತಿಂದರು ಎಂಬುದಕ್ಕೂ ಜಗಳ, ಮನಸ್ತಾಪ, ಕೋಪ. ಈಗ ಮೊಟ್ಟೆ ತಿಂದ ವಿಚಾರಕ್ಕೆ ಪ್ರಶಾಂತ್ ಸಂಬರಗಿ ಜಗಳ ಮಾಡಿ ಸುದ್ದಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *