– 45ರ ಅಪ್ಪನಿಂದ ನೀಚಕೃತ್ಯ
ಭೋಪಾಲ್: 45ರ ತಂದೆ 12 ವರ್ಷದ ಮಗಳ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯ ವಿರುದ್ಧ ಮಹಿಳೆ ದೂರು ದಾಖಲಿಸಿದ್ದು, ಆರೋಪಿ ಮನೆಯಿಂದ ಎಸ್ಕೇಪ್ ಆಗಿದ್ದಾನೆ.
ತಾಯಿ ಪಕ್ಕ ಮಲಗಿದ್ಳು: 45 ವರ್ಷದ ವ್ಯಕ್ತಿಗೆ 17, 15 ಮತ್ತು 12 ವರ್ಷದ ಮೂರು ಹೆಣ್ಣು ಮಕ್ಕಳಿವೆ. ತಡರಾತ್ರಿ ಕಿರಿಯ ಮಗಳ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ತಾಯಿಯೊಂದಿಗೆ ಮಲಗಿದ್ದಳು. ರಾತ್ರಿ ಮಗಳ ಪಕ್ಕಕ್ಕೆ ಬಂದು ಮಲಗಿದ ತಂದೆ ನಿಧಾನವಾಗಿ ಆಕೆಯ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಬಾಲಕಿ ಕಿರುಚಿಕೊಳ್ಳುತ್ತಿದ್ದಂತೆ ತಾಯಿ ಎಚ್ಚರಗೊಂಡು ಪತಿಯ ನೀಚತನಕ್ಕೆ ಬ್ರೇಕ್ ಹಾಕಿ ತಡರಾತ್ರಿಯೇ ಮಗಳ ಜೊತೆ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.
ಘಟನೆ ಬಳಿಕ ಆರೋಪಿ ಮನೆಯಿಂದ ಕಾಲ್ಕಿತ್ತಿದ್ದಾನೆ. ಘಟನೆ ಸಂಬಂಧ ಪೊಲೀಸರು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.