ರಾಂಚಿ: ತಾಯಿ ಸೇರಿ ಒಂದೇ ಮನೆಯ 6 ಮಂದಿ ಮಾಹಾಮಾರಿ ಚೀನಿ ವೈರಸ್ ಗೆ ಬಲಿಯಾದ ಘಟನೆ ಜಾರ್ಖಂಡ್ ನ ಧನ್ಬಾದ್ ಜಿಲ್ಲೆಯ ಕತ್ರಾ ಎಂಬಲ್ಲಿ ನಡೆದಿದೆ.
88 ವರ್ಷದ ವೃದ್ಧೆ ಹಾಗೂ ಆಕೆಯ 5 ಮಂದಿ ಗಂಡು ಮಕ್ಕಳು ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ. ಇವರೆಲ್ಲರೂ ಜುಲೈ 4 ರಿಂದ ಜುಲೈ 20ರೊಳಗೆ ಸಾವನ್ನಪ್ಪಿದ್ದಾರೆ ಎಂಬುದಾಗಿ ವರದಿಯಾಗಿದೆ.
Advertisement
Advertisement
ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವೃದ್ಧೆ ದೆಹಲಿಯಿಂದ ಧನ್ಬಾದ್ ಗೆ ಬಂದಿದ್ದರು. ಆ ಬಳಿಕದಿಂದ ಅವರು ಅನಾರೋಗ್ಯಕ್ಕೀಡಾಗಿದ್ದು, ಬೊಕರೋ ಎಂಬಲ್ಲಿನ ನರ್ಸಿಂಗ್ ಹೋಂಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
Advertisement
ಇತ್ತ ತಾಯಿ ತೀರಿಕೊಂಡಿದ್ದರಿಂದ ಆಕೆಯ ಐವರು ಗಂಡು ಮಕ್ಕಳು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ಅಲ್ಲಿಯವರೆಗೆ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ ಎಂಬ ಯಾವುದೇ ಸುಳಿವು ಇರಲಿಲ್ಲ. ವೃದ್ಧೆ ಮೃತಪಟ್ಟ ಬಳಿಕ ಆಕೆಯ ಕೋವಿಡ್ 19 ಟೆಸ್ಟ್ ಮಾಡಿದ್ದು, ವರದಿ ಬರುವ ಮೊದಲೇ ಆಕೆಯ ಮಕ್ಕಳು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಹೀಗಾಗಿ ಅದಾಗಲೇ ಮಕ್ಕಳಿಗೂ ಕೊರೊನಾ ಸೋಂಕು ಹರಡಿದೆ.
Advertisement
ವೃದ್ಧೆಯ ಅಂತಿಮ ವಿಧಿ-ವಿಧಾನಗಳನ್ನು ನಡೆಸಿದ ಬಳಿಕ ಆಕೆಯ ವರದಿ ಪಾಸಿಟಿವ್ ಎಂದು ಬಂದಿದೆ. ಪರಿಣಾಮ ಅಂತ್ಯಕ್ರಿಯೆ ನಡೆಸಿದ ಐವರು ಮಕ್ಕಳಿಗೂ ಒಬ್ಬರಾದ ಬಳಿಕ ಒಬ್ಬರಿಗೆ ಮಹಾಮಾರಿ ಕೊರೊನಾ ಅಂಟಿಕೊಂಡಿದೆ. ಸದ್ಯ ವೃದ್ಧೆಯ ಒಬ್ಬ ಮಗ ಮಾತ್ರ ಉಳಿದುಕೊಂಡಿದ್ದು, ಆತ ದೆಹಲಿಯಲ್ಲಿ ನೆಲೆಸಿದ್ದಾನೆ.