– ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ
– ಪ್ರಿಯಕರನೊಂದಿಗೆ ತಾಯಿ ಪರಾರಿ
ಚೆನ್ನೈ: ತಾಯಿಯ ಪ್ರಿಯಕರನಿಂದ ಮಗಳು ಅತ್ಯಾಚಾರಕ್ಕೊಳಗಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಪತಿಯಿಂದ ಬೇರ್ಪಟ್ಟಿದ್ದ ಮಹಿಳೆ 15 ವರ್ಷದ ಮಗಳ ಜೊತೆ ಜೀವನ ನಡೆಸುತ್ತಿದ್ದಳು. ಪತಿಯಿಂದ ದೂರವಾದ ಮಹಿಳೆಗೆ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಆಗ ತಾಯಿಯ ಪ್ರಿಯಕರ ಮನೆಗೆ ಬಂದು ಹೋಗುತ್ತಿದ್ದನು. ಈ ವೇಳೆ ಆತ ಮಗಳ ಮೇಲೆ ಕಣ್ಣು ಹಾಕಿದ್ದಾನೆ.
ನಿನ್ನ ಮಗಳನ್ನು ನನ್ನೊಂದಿಗೆ ಇರಲು ಹೇಳು ಇಲ್ಲವಾದರೆ ನಾನು ನಿನ್ನ ಬಿಟ್ಟು ಹೋಗುತ್ತೇನೆ ಎಂದು ಆತ ಹೆದರಿಸಿದ್ದಾನೆ. ಮಹಿಳೆ ಆತನ ಸಂಬಂಧವನ್ನು ಎಲ್ಲಿ ಕಳೆದುಕೊಳ್ಳುತ್ತೇನೆ ಎನ್ನುವ ಭಯದಿಂದ ಮಗಳನ್ನು ಅವನೊಂದಿಗೆ ಇರಿಸಲು ಒಪ್ಪಿದ್ದಾಳೆ. ಅಪ್ರಾಪ್ತ ಬಾಲಕಿ ನನಗೆ ಇಷ್ಟವಿಲ್ಲ ಅಮ್ಮ ನನಗೆ ಈ ರೀತಿಯಾಗಿ ಮೋಸ ಮಾಡಬೇಡ ಎಂದು ಕೇಳಿಕೊಂಡಿದ್ದಾಳೆ. ಆದರೆ ಮಗಳ ಮಾತು ಕೇಳದ ತಾಯಿ ಅವಳ ಪ್ರಿಯಕರ ಇದ್ದ ರೂಮ್‍ಗೆ ಮಗಳನ್ನು ಹಾಕಿ ನೂಕಿ ಬಾಗಿಲು ಹಾಕಿದ್ದಾಳೆ. ಹೀಗೆ ಆತ ಹಲವು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಬಾಲಕಿ ಒಮ್ಮೆ ಸಹೋದರ ಮಾವನ ಮನೆಗೆ ಹೋದಾಗ ಬಾಲಕಿ ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿ ಪ್ರಶ್ನಿಸಿದ್ದಾರೆ. ಆಗ ಬಾಲಕಿ ನಡೆದಿರುವ ಕಥೆಯನ್ನು ಹೇಳಿಕೊಂಡಿದ್ದಾಳೆ. ನಂತರ ಬಾಲಕಿ ಮಾವ ಅವಳ ತಾಯಿಯಲ್ಲಿ ಕೇಳಲು ಹೋದಾಗ ಮಹಿಳೆ ಅಲ್ಲಿಂದ ಪರಾರಿಯಾಗಿದ್ದಳು. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಾಲಕಿ 15ನೇ ವಯಸ್ಸಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.