ತಾಯಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಮಗನಿಂದಲೇ ಬ್ಲ್ಯಾಕ್‍ಮೇಲ್

Public TV
1 Min Read
mobile secret 1

-ಪುತ್ರನ ವಿರುದ್ಧ ದೂರು ದಾಖಲಿಸಿದ ತಾಯಿ
-ಕುಟುಂಬಸ್ಥರಿಗೆ ಫೋಟೋ ಕಳಿಸಿದ ನೀಚ

ಜೈಪುರ: ತಾಯಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಆಸ್ತಿ ಬರೆದುಕೊಡುವಂತೆ ಬೆದರಿಕೆ ಹಾಕಿದ್ದ ನೀಚ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಶಿವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 75 ವರ್ಷದ ವೃದ್ಧ ತಾಯಿ ಮಗನ ವಿರುದ್ಧ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗನ ನಡುವೆ ಆಸ್ತಿಯ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಆಸ್ತಿ ತನ್ನದಾಗಬೇಕೆಂಬ ದುರಾಸೆಗೆ ಬಿದ್ದ 50 ವರ್ಷದ ಮಗ ತಾಯಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ, ಕುಟುಂಬಸ್ಥರ ಮೊಬೈಲ್ ಗೆ ಸೆಂಡ್ ಮಾಡಿದ್ದಾನೆ.

man using mobile phone 1

ರಕ್ಷಣೆಯ ನಾಟಕ ಮಾಡಿದ್ದ: ಮಹಿಳೆ ಮನೆಯಲ್ಲಿ ಹವನ ಮಾಡುತ್ತಾ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಂದ ಮಗ ಬೆಂಕಿ ಹತ್ತಿಕೊಂಡಿದೆ ಎಂದು ಕೂಗಿ, ಬಟ್ಟೆ ಕಳಚಿ ದೂರ ಬರುವಂತೆ ತಾಯಿಗೆ ಹೇಳಿದ್ದಾನೆ. ಬೆಂಕಿಯಿಂದ ಪಾರಾಗಲು ವೃದ್ಧೆ ಮಗ ಹೇಳಿದಂತೆ ಬಟ್ಟೆ ತೆಗೆದಿದ್ದಾರೆ. ಈ ಸಮಯದಲ್ಲಿಯೇ ಫೋಟೋ ತೆಗೆದುಕೊಂಡಿದ್ದಾನೆ.

mobile phone camera

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ತಾರಾಚಂದ್, ಎರಡು ದಿನಗಳ ಹಿಂದೆ ಠಾಣೆಗೆ ಬಂದ ವೃದ್ಧೆ ತನ್ನ 50 ವರ್ಷದ ಮಗನ ವಿರುದ್ಧ ದೂರು ದಾಖಲಿಸಿದ್ದರು. ಪುತ್ರ ತನ್ನ ನಗ್ನ ಚಿತ್ರಗಳನ್ನು ಕ್ಲಿಕ್ಕಿಸಿ ಆಸ್ತಿ ಬರೆದುಕೊಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಹೇಳಿದ್ದಾರೆ.

mobile 050319010351

ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೀಚ ಮಗನನ್ನು ಬಂಧಿಸಿದ್ದಾರೆ. ಬಂಧಿಸುವ ಮುನ್ನವೇ ಪುತ್ರ ಫೋಟೋಗಳನ್ನ ಡಿಲೀಟ್ ಮಾಡಿದ್ದನು. ಪೊಲೀಸರು ಸೈಬರ್ ಸಹಾಯದಿಂದ ಫೋಟೋಗಳನ್ನು ಪುನಃ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *