ಬೀದರ್: ಮಹಾಮಾರಿ ಕೊರೊನಾ ತಾಯಿ ಹಾಗೂ ಮಗನನ್ನು ಬಲಿ ಪಡೆದು ಕುಟುಂಬವನ್ನು ಕಣ್ಣೀರಿಗೆ ತಳ್ಳಿದೆ. ಬೀದರ್ ನಲ್ಲಿ ಕೋವಿಡ್ ಮಹಾಮಾರಿಗೆ ತಾಯಿ, ಮಗ ಬಲಿಯಾಗಿದ್ದಾರೆ.
ತಾಯಿ ಪಾರ್ವತಿ(55) ಹಾಗೂ ಮಗ ಶಿವಕಾಂತ್ ಪಾಟೀಲ್(30) ಕೊರೊನಾಗೆ ಬಲಿಯಾದ ದುರ್ದೈವಿಗಳು. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಪಾರ್ವತಿ ಕೋವಿಡ್ ಗೆ ಏಪ್ರಿಲ್ 22 ರಂದು ಬಲಿಯಾಗಿದ್ದರು. ತಾಯಿ ಕೊವೀಡ್ ಗೆ ಬಲಿಯಾದ ಸುದ್ದಿ ತಿಳಿದು ಕೆನಾಡಾದಿಂದ ಬಂದ ಮಗನಿಗೂ ಕೊರೊನಾ ವಕ್ಕರಿಸಿತ್ತು. ಬಳಿಕ ಆತನಿಗೆ ಬ್ರಿಮ್ಸ್ ನಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತ್ತು.
ಚಿಕಿತ್ಸೆ ನೀಡಿದರೂ ಅನಾರೋಗ್ಯ ಹೆಚ್ಚಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗ ಕೂಡಾ ಕೋವಿಡ್ ಗೆ ಬಲಿಯಾಗಿದ್ದಾನೆ.
ಎರಡು ವರ್ಷಗಳಿಂದ ಕೆನಡಾದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಗ ಶಿವಕಾಂತ್ ಪಾಟೀಲ್ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾನೆ. ಇವರು ಮೂಲತಃ ಹುಮ್ನಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದವರಾಗಿದ್ದು ಹಲವು ವರ್ಷಗಳಿಂದ ಬೀದರ್ ನ ಬಸವನಗರದಲ್ಲಿ ವಾಸವಾಗಿದ್ರು. ತಾಯಿಯನ್ನು ನೋಡಲು ವಿದೇಶದಿಂದ ಬಂದ ಮಗನನ್ನು ಕೊರೊನಾ ಬಲಿ ಪಡೆದಿದ್ದು ಮಾತ್ರ ಬಾರಿ ದುರಂತವೇ ಸರಿ.