ಹುಬ್ಬಳ್ಳಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ನರ್ಸ್ ಗಳು ತಮ್ಮ ಜೀವ ಪಣಕ್ಕಿಟು ರೋಗಿಗಳ ಉಪಚಾರ ಮಾಡುತ್ತಿದ್ದಾರೆ. ಆದರೆ ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೋಗ್ಯ ಕೇಂದ್ರದ ನರ್ಸ್ ಗಳು ಮಾತ್ರ ಮಕ್ಕಳು ಹಾಗೂ ಪೋಷಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ.
Advertisement
ಹೆಗ್ಗೇರಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ಗುರುವಾರ ನವಜಾತ ಶಿಶುಗಳಿಂದ ಹಿಡಿದು 10 ವರ್ಷದ ಮಕ್ಕಳಿಗೆ ಓಪಿವಿ, ಬಿಸಿಜಿ, ಪೆಂಟಾ, ಐಪಿವಿ, ವಿಟಮಿನ್ ಲಸಿಕೆಯನ್ನು ಹಾಕಲಾಗುತ್ತದೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ ಮಕ್ಕಳಿಗೆ ಯಾವುದೇ ಲಸಿಕೆ ಹಾಕಿರಲಿಲ್ಲ. ಈಗ ಲಸಿಕೆ ಹಾಕಲಾಗುತ್ತಿದ್ದು, ತಾಯಂದಿರು ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನರ್ಸ್‍ಗಳು ತಾಯಂದಿರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ.
Advertisement
Advertisement
ಆಸ್ಪತ್ರೆಯ ಹೊರಗಡೆ ತಾಯಂದಿರು ಶಿಶುಗಳನ್ನು ಹೊತ್ತುಕೊಂಡು ನೆಲದ ಮೇಲೆ ಕುಳಿತುಕೊಳ್ಳುವ ಸ್ಥಿತಿ ಇದೆ. ಸರಿಯಾದ ಆಸನ ವ್ಯವಸ್ಥೆ ಇಲ್ಲ. ನೆತ್ತಿ ಸುಡುವ ಬಿಸಿಲಲ್ಲಿಯೇ ತಾಯಂದಿರು ಸರತಿಯಲ್ಲಿ ನಿಲ್ಲುವ ಪರಸ್ಥಿತಿ ಇದೆ. ಈ ಬಗ್ಗೆ ಪ್ರಶ್ನಿಸಿದ ತಾಯಿಯೊಬ್ಬರಿಗೆ ನರ್ಸ್ ಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ನರ್ಸ್ ಗಳ ವರ್ತನೆಯನ್ನು ಸರಿಪಡಿಸಬೇಕು. ಅಲ್ಲದೆ ಮಕ್ಕಳ ಪೋಷಕರಿಗೆ ಕನಿಷ್ಟ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.