ತಾಪ್ಸಿ ಪನ್ನು, ಅನುರಾಗ್ ಆದಾಯದಲ್ಲಿ 650 ಕೋಟಿ ವ್ಯತ್ಯಾಸ ಪತ್ತೆ ಹಚ್ಚಿದ ಐಟಿ ಅಧಿಕಾರಿಗಳು

Public TV
2 Min Read
taapsee pannu anurag kashyap 2

– ಮೊಬೈಲ್‍ನಲ್ಲಿದ್ದ ದಾಖಲೆಗಳು ಡಿಲೀಟ್
– 5 ಕೋಟಿ ನಗದು ಹಣ ಸ್ವೀಕರಿಸಿದ ತಾಪ್ಸಿ

ಮುಂಬೈ: ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ಜನಪ್ರಿಯ ನಟಿ ತಾಪ್ಸಿ ಪನ್ನು ಮನೆ ಮೇಲಿನ ಐಟಿ ದಾಳಿ ಬಾಲಿವುಡ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ನೂರಾರು ಕೋಟಿ ರೂ.ಗಳನ್ನು ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಎರಡು ದಿನಗಳ ಕಾಲ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸುಮಾರು 5 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆಸಿರುವ ಬಗ್ಗೆ ನಮಗೆ ರಿಸಿಪ್ಟ್ ಸಿಕ್ಕಿದೆ. ಲೆಕ್ಕ ನೀಡುವಾಗ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು 20 ಕೋಟಿ ರೂ.ಗಳ ನಕಲಿ ಖರ್ಚು ತೋರಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

anurag kashyap tapsee pannu

ತಾಪ್ಸಿ ಪನ್ನು ಸುಮಾರು 5 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದು, ಅವರ ಕಂಪನಿ ಸಹ ತೆರಿಗೆಯನ್ನು ವಂಚಿಸಿದೆ. ತಾಪ್ಸಿ ಪನ್ನು ಅವರ ವ್ಯವಹಾರಗಳು ಹಾಗೂ ಸಿನಿಮಾಗಳಿಗೆ ಸಹಿ ಹಾಕುವಾಗ ಪಡೆದ ಮೊತ್ತದ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲ ಸಿನಿಮಾಗಳಿಗೆ ಸಹಿ ಹಾಕುವಾಗ ಕೋಟಿ ರೂ.ಗಿಂತ ಕಡಿಮೆ ಹಣ ಪಡೆದಿದ್ದಾರೆ. ನಟಿಯ ಪ್ರಾಥಮಿಕ ಹೇಳಿಕೆಯನ್ನು ಮಾರ್ಚ್ 3ರಂದು ದಾಖಲಿಸಿದ್ದು, ಇಂದೂ ಸಹ ವಿವರವಾದ ಹೇಳಿಕೆಯನ್ನು ನಟಿ ತಾಪ್ಸಿ ಪನ್ನು ದಾಖಲಿಸಿದ್ದಾರೆ.

tapsee pannu 02

ನಟಿಯ ಮೊಬೈಲ್‍ನಿಂದ ಕೆಲ ಡೇಟಾವನ್ನು ಡಿಲೀಟ್ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಈ ಡೇಟಾ ಮರಳಿ ಪಡೆಯಲು ತಜ್ಞರನ್ನು ಸಂಪರ್ಕಿಸಲಾಗಿದೆ. ಮುಂಬರುವ ದಿನಗಳಲ್ಲಿ ನಟಿಯನ್ನು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಅನುರಾಗ್ ಕಶ್ಯಪ್ ಒಡೆತನದ ಫ್ಯಾಂಟಮ್ ಫಿಲಂಸ್ ಷೇರುದಾರರು ಸುಮಾರು 600 ಕೋಟಿ ರೂ.ಗಳ ಆದಾಯ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಶಂಕಿಸಲಾಗಿದೆ. ಫ್ಯಾಂಟಮ್ ಫಿಲಂಸ್‍ನಿಂದ ಷೇರು ಮಾರಾಟ ನಡೆಸಿದ್ದು, ಇದರಿಂದ ಗಳಿಸಿದ ಹಣದಿಂದ ಆದಾಯ ತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ.

1200px Income Tax Department May 2018.svg

ಫ್ಯಾಂಟಮ್ ಫಿಲಂಸ್‍ನವರು ಸುಳ್ಳು ವೆಚ್ಚ ಹಾಗೂ ನಕಲಿ ಬಿಲ್‍ಗಳನ್ನು ಸೃಷ್ಟಿಸಿದ್ದಾರೆ. ಅನುರಾಗ್ ಕಶ್ಯಪ್ ಅವರ ಮೊಬೈಲ್‍ನ ಡೇಟಾಗಳನ್ನು ಸಹ ಡಿಲೀಟ್ ಮಾಡಿರುವುದು ಪತ್ತೆಯಾಗಿದೆ. ಫ್ಯಾಂಟಮ್ ಫಿಲಂಸ್‍ನಲ್ಲಿ ಅನುರಾಗ್ ಕಶ್ಯಪ್ ಸಹ ಶೇರ್ ಹೋಲ್ಡರ್ ಆಗಿದ್ದಾರೆ. ಅಲ್ಲದೆ 300 ಕೋಟಿ ರೂ.ಗಳ ವ್ಯವಹಾರದ ಕುರಿತು ಸಂಸ್ಥೆಯ ಅಧಿಕಾರಿಗಳು ವಿವರಿಸುವಲ್ಲಿ ವಿಫಲರಾಗಿದ್ದಾರೆ. ಬಾಕ್ಸ್ ಆಫಿಸ್ ಕಲೆಕ್ಷನ್‍ಗೆ ಹೋಲಿಸಿದರೆ ಪ್ರೊಡಕ್ಷನ್ ಹೌಸ್ ಆದಾಯವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ಐಟಿ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *