ನವದೆಹಲಿ: ಹೆಣ್ಣು ಮಕ್ಕಳು ಯಾವಾಗಲೂ ಅಡುಗೆ ಮನೆಗೆ ಮಾತ್ರ ಸೀಮಿತ ಎಂದು ಹೇಳುತ್ತಿದ್ದ ಮಾತು ಬದಲಾಗಿದೆ. ಇತ್ತೀಚೆಗೆ ಮದುವೆಯಾದ ಯುವತಿ ತನ್ನ ತವರು ಮನೆಯಿಂದ ಗಂಡನ ಮನೆಗೆ ಹೋಗುವ ವೇಳೆ ಕಾರಿನ ಚಾಲಕ ಸೀಟಿನಲ್ಲಿ ಕುಳಿತು ಕಾರು ಚಾಲಯಿಸಿದ್ದಾಳೆ.
ಆಧುನಿಕ ಜಗತ್ತಿನ ಹೆಣ್ಣು ಮಕ್ಕಳು ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಮದುವೆ ಸಮಯದಲ್ಲಿ ವಧು ನಾಚುತ್ತಾ ತಲೆ ಬಾಗಿಸಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ತವರು ಮನೆ ಬಿಟ್ಟು ಹೋಗುವಾಗ ಅಳುತ್ತಾ ಗಂಡನ ಮನೆಗೆ ಹೋಗುತ್ತಾರೆ. ಆದರೆ ಇದೀಗ ಕಾಲ ಬದಲಾಗಿದೆ ಎಂದರೇ ತಪ್ಪಾಗಲಾರದು.
ಹೌದು ವೀಡಿಯೋಯೊಂದರಲ್ಲಿ ಆಗಷ್ಟೇ ಮದುವೆಯಾದ ಸ್ನೇಹಾ ಸಿಂಘಿ ಎಂಬ ವಧು, ತನ್ನ ತವರು ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೊರಡಲು ಕಾರಿನ ಚಾಲಕನ ಸೀಟಿನಲ್ಲಿ ಡ್ರೈವ್ ಮಾಡಲು ಕುಳಿತುಕೊಳ್ಳುತ್ತಾಳೆ. ಈ ವೇಳೆ ವರ ಡ್ರೈವ್ ಮಾಡದೇ ವಧುವಿನ ಪಕ್ಕದಲ್ಲಿ ಕುಳಿತುಕೊಂಡರೆ, ಉಳಿದವರು ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ಸ್ನೇಹ ಎಲ್ಲರಿಗೂ ಕೈ ಬೀಸಿ ನಗುತ್ತಾ ಬೈ ಹೇಳಿ ಕಾರು ಚಲಾಯಿಸುವ ಮೂಲಕ ವಿಶಿಷ್ಟವಾಗಿ ವಿದಾಯ ಹೇಳುತ್ತಾರೆ.
View this post on Instagram
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದ್ದು, ಈ ವರೆಗೂ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.