– ಏಳು ಜನರಿಗೆ ಗಾಯ, ಚಿಕಿತ್ಸೆ
– ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ
ಲಕ್ನೋ: ತಾಯಿಯ ಮನೆಯಿಂದ ಬರಲ್ಲ ಎಂದು ಪತ್ನಿ ಹಠ ಹಿಡಿದಿದ್ದಕ್ಕೆ ಗಂಡ ಇಡೀ ಮನೆಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ರತ್ತುಪುರ್ವಾದಲ್ಲಿ ಶುಕ್ರವಾರ ನಡೆದಿದೆ.
ಮನೀಶಾ ಮತ್ತು ಮುಕೇಶ್ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಬಾಣಂತನಕ್ಕೆ ಬಂದಿದ್ದ ಮನೀಶಾ ಪತಿ ಹಲ್ಲೆಯಿಂದ ಭಯಗೊಂಡು ಆತನ ಜೊತೆ ಹೋಗಲ್ಲ ಅಂತ ಹಠ ಹಿಡಿದಿದ್ದಳು. ಗುರುವಾರ ರಾತ್ರಿ ಮನೀಶಾ ಮತ್ತು ಮುಕೇಶ್ ಇಬ್ಬರ ನಡುವೆ ಫೋನ್ ನಲ್ಲಿ ಜಗಳ ನಡೆದಿದೆ. ಶುಕ್ರವಾರ ಬೆಳಗಿನ ಜಾವ ಅತ್ತೆ ಮನೆಗೆ ಬಂದ ಮುಕೇಶ್ ಹೊರಗಿನಿಂದ ಚಿಲಕ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ. ಕೂಡಲೇ ಸ್ಥಳೀಯರು ಕುಟುಂಬಸ್ಥರನ್ನ ರಕ್ಷಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಮನೆಯ ಮುಂದೆ ಕೂಗಾಡುತ್ತಿರುವ ಧ್ವನಿ ಕೇಳಿತ್ತು. ಹೊರಗೆ ಬಂದು ನೋಡಿದಾಗ ಅಣ್ಣನ ಅಳಿಯ ಬಂದು ಎಲ್ಲರನ್ನ ನಿಂದಿಸುತ್ತಿದ್ದನು. ನೋಡ ನೋಡುತ್ತಿದ್ದಂತೆ ಮನೆಗೆ ಬೆಂಕಿ ಹಚ್ಚಿ ಓಡಿ ಹೋದನು. ಬೆಂಕಿ ತೀವ್ರತೆ ಹೆಚ್ಚಾಗುವ ಮೊದಲೇ ಸ್ಥಳೀಯರ ಸಹಾಯದಿಂದ ಎಲ್ಲರನ್ನು ರಕ್ಷಿಸಲಾಯ್ತು ಎಂದು ಮನೀಶಾ ಚಿಕ್ಕಪ್ಪ ಕಮಲೇಶ್ ಹೇಳಿದ್ದಾರೆ.
ಪತಿಯ ಕಿರುಕುಳದಿಂದ ಮನೀಶಾ ಗಂಡನ ಜೊತೆ ಹೋಗದಿರಲು ನಿರ್ಧರಿಸಿದ್ದಳು. ಶುಕ್ರವಾರ ಬೆಳಗಿನ ಜಾವ ಬಂದ ಮುಕೇಶ್ ಪತ್ನಿಯನ್ನ ತನ್ನ ಜೊತೆ ಬರುವಂತೆ ಕರೆದಿದ್ದಾಳೆ. ಆದ್ರೆ ಮನೀಶಾ ಬರಲು ಒಪ್ಪದಿದ್ದಾಗ ಇಡೀ ಮನೆಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಮುಕೇಶ್ ಮಗು ಸೇರಿದಂತೆ ಏಳು ಜನರು ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯ ಪತ್ತೆಗಾಗಿ 4 ಟೀಂ ರಚನೆ ಮಾಡಲಾಗಿದೆ ಎಂದು ಎಸ್‍ಪಿ ದೀಪಕ್ ಭೂಕರ್ ಮಾಹಿತಿ ನೀಡಿದ್ದಾರೆ.