ಮುಂಬೈ: 2021ರ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುವ ಮುಂಚೆಯೇ ಐಪಿಎಲ್ ಫ್ರಾಂಚೈಸಿಗಳು ತವರಿನಲ್ಲೇ ಪಂದ್ಯ ಆಯೋಜಿಸುವಂತೆ ಪಟ್ಟು ಹಿಡಿದಿದೆ.
Advertisement
ಕ್ರಿಕೆಟ್ ಪ್ರೇಮಿಗಳ ಹಾಟ್ ಫೆವ್‍ರೇಟ್ ಐಪಿಎಲ್ ಟೂರ್ನಿ ಶುರುವಾಗಲು ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಆದರೆ ಇದಕ್ಕೂ ಮುಂಚೆ ಬಿಸಿಸಿಐ ಮತ್ತು ಕೆಲ ಐಪಿಎಲ್ ಫ್ರಾಂಚೈಸಿಗಳ ನಡುವೆ ಅಸಮಾಧಾನ ಕಾಣಿಸಿಕೊಂಡಿದೆ.
Advertisement
ಕೊರೊನಾ ಹಿನ್ನಲೆಯಲ್ಲಿ 13ನೇ ಆವೃತ್ತಿಯ ಐಪಿಎಲ್‍ನ್ನು ಯುಎಇಯಲ್ಲಿ ನಡೆಸಿದ್ದ ಬಿಸಿಸಿಐ ಈ ಬಾರಿ 14ನೇ ಆವೃತ್ತಿಯನ್ನು ಭಾರತದಲ್ಲೇ ನಡೆಸುವ ಯೋಜನೆ ಹಾಕಿಕೊಂಡಿದೆ. ಆದರೆ ಈ ಮಧ್ಯೆ ಕೊರೊನಾ ಹಾವಳಿ ಕಡಿಮೆಯಾಗದೆ ಇರುವುದರಿಂದಾಗಿ ಐಪಿಎಲ್ ಪಂದ್ಯಗಳನ್ನು ದೇಶದ ಕೆಲವೇ ತಾಣಗಳಲ್ಲಿ ನಡೆಸಲು ಪ್ಲಾನ್ ಮಾಡಿಕೊಂಡಿತ್ತು. ಆದರೆ ಈ ನಿರ್ಧಾರದಿಂದ ಕೆಲ ಐಪಿಎಲ್ ತಂಡಗಳು ತಮ್ಮ ತವರು ಪಂದ್ಯಾಟದಿಂದ ವಂಚಿತವಾಗುತ್ತವೆ. ಇದನ್ನು ಫ್ರಾಂಚೈಸಿಗಳು ಒಪ್ಪದೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದೆ.
Advertisement
Advertisement
ದೇಶದ 6 ತಾಣಗಳಾದ ಮುಂಬೈ, ಬೆಂಗಳೂರು, ಚೆನ್ನೈ, ನವದೆಹಲಿ, ಅಹಮದಾಬಾದ್ ಮತ್ತು ಕೋಲ್ಕತ್ತಾದಲ್ಲಿ ಪಂದ್ಯ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಈ ಪ್ಲಾನ್ ಅಂತಿಮವಾದರೆ ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ತವರಿನ ಪಂದ್ಯ ಮಿಸ್ ಆಗಲಿದೆ. ಆದರೆ ಪ್ರಸ್ತುತ ಈ ತಂಡಗಳು ತಮಗೂ ತವರಿನ ಪಂದ್ಯ ಸಿಗಬೇಕು. ನಾವು ಕೊರೊನಾ ನಿಯಮ ಪಾಲನೆ ಮಾಡಿ ಪಂದ್ಯಗಳನ್ನು ನಡೆಸಿಕೊಡುತ್ತೇವೆ ಎಂದು ಬೇಡಿಕೆ ಇಟ್ಟಿದೆ.
ಬಿಸಿಸಿಐ ಆಟ ಗಾರರ ಸುರಕ್ಷೆ ಮತ್ತು ಟೂರ್ನಿ ಸೂಸೂತ್ರವಾಗಿ ನಡೆಸುವ ಕಾರಣದಿಂದಾಗಿ ಮೊದಲು 3 ತಾಣಗಳಾದ ಮುಂಬೈ, ಪುಣೆ, ಮತ್ತು ಅಹಮದಾಬಾದ್‍ನ್ನು ಆಯ್ಕೆ ಮಾಡಿಕೊಂಡಿತ್ತು. ನಂತರ ತನ್ನ ನಿರ್ಧಾರ ಬದಲಾಯಿಸಿಕೊಂಡು 6 ತಾಣಗಳನ್ನು ಆಯ್ಕೆ ಮಾಡುತ್ತಿದೆ ಎಂಬ ಸುದ್ದಿ ಕೇಳುತ್ತಿದ್ದಂತೆ, ತವರು ಪಂದ್ಯದಿಂದ ವಂಚಿತವಾಗುವ ತಂಡಗಳಿಗೂ ಅವಕಾಶ ಕಲ್ಪಿಸಿ ಅಲ್ಲಿಯೂ ಪಂದ್ಯ ನಡೆಸುವಂತೆ ಫ್ರಾಂಚೈಸಿಗಳಿಂದ ವಾದ ಕೇಳಿಬರುತ್ತಿದೆ.
ಈಗಾಗಲೇ ಪಂಜಾಬ್, ತೆಲಂಗಾಣ ಸರ್ಕಾರ ಮತ್ತು ಪಂಜಾಬ್‍ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ನಮ್ಮ ರಾಜ್ಯದಲ್ಲೂ ಐಪಿಎಲ್ ಪಂದ್ಯ ನಡೆಸಿ ನಾವು ಸೂಕ್ತ ರೀತಿಯ ಭದ್ರತೆ ಕಲ್ಪಿಸಿಕೊಡುತ್ತೇವೆ ಎಂದು ಬಿಸಿಸಿಐಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಬಿಸಿಸಿಐ ಒತ್ತಡಕ್ಕೆ ಸಿಲುಕೊಕೊಂಡಿದೆ. ಇತ್ತ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶ ಇದೆಯಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಕ್ರಿಕೆಟ್ ಪ್ರೇಮಿಗಳು ಮಾತ್ರ ಚುಟುಕು ಸಮರ ಆದಷ್ಟು ಬೇಗ ಪ್ರಾರಂಭವಾಗಲಿ ಎಂಬ ಬಯಕೆಯಲ್ಲಿದ್ದಾರೆ.