ಬೆಂಗಳೂರು: ಕೋಟಿ ರಾಮು ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಕೊರೊನಾದಿಂದ ನಿಧನರಾಗಿದ್ದರೆ ಎಂದರೆ ಇಂದಿಗೂ ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ರಾಮುರನ್ನು ಕಳೆದುಕೊಂಡ ಚಂದನವನಕ್ಕೆ ಭರಿಸಲಾಗದ ನಷ್ಟವುಂಟಾಗಿದೆ.
ಪತಿಯ ಅಗಲಿಕೆಯಿಂದ ನೊಂದಿರುವ ನಟಿ ಮಾಲಾಶ್ರೀಗೆ ಸ್ಯಾಂಡಲ್‍ವುಡ್‍ನ ಅನೇಕ ಕಲಾವಿದರು ಸಾಂತ್ವನ ಹೇಳುತ್ತಿದ್ದಾರೆ. ಇದೀಗ ನವರಸ ನಾಯಕ ಜಗ್ಗೇಶ್ ಕೂಡ ಮಾಲಾಶ್ರೀಯವರಿಗೆ ಟ್ವಿಟ್ಟರ್ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.
‘ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೇ ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದಾರೆ.
@RamuMalashree
ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ!
ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ!
ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನನೀಡಿದ ಮಹನೀಯ ನನ್ನ ತಮ್ಮ ರಾಮು.
ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೆ
— ನವರಸನಾಯಕ ಜಗ್ಗೇಶ್ (@Jaggesh2) April 30, 2021
ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನು ರಾಮು ಎತ್ತರಕ್ಕೆ ಬೆಳೆಸಿ. ನಿಮ್ಮ ಜೊತೆ ನಾವು ಉದ್ಯಮದ ಎಲ್ಲ ಸ್ನೇಹಿತರು ಸದಾ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ನಿಮ್ಮ ಕಲಾಬಂಧು ಎಂದು ಟ್ವೀಟ್ ಮಾಡಿದ್ದಾರೆ.
ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ..
ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನ ರಾಮು ಎತ್ತರಕ್ಕೆ ಬೆಳಸಿ..ನಿಮ್ಮ ಜೊತೆ ನಾವು ಉಧ್ಯಮದ ಎಲ್ಲಾ ಸ್ನೇಹಿತರು ಸದಾ ಇರುತ್ತೇವೆ.. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ನಿಮ್ಮ ಕಲಾಬಂಧು ????
— ನವರಸನಾಯಕ ಜಗ್ಗೇಶ್ (@Jaggesh2) April 30, 2021
ಈ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶ್ರುತಿ, ಸುದೀಪ್, ಮಾಳವಿಕ ಅವಿನಾಶ್, ಶ್ರೀ ಮುರುಳಿ ಸೇರಿದಂತೆ ಅನೇಕ ಕಲಾವಿದರೂ ಸಾಂತ್ವನ ಹೇಳಿದ್ದರು.