ತರುಣ್ ಶಿವಪ್ಪರ ಸಿನಿಮಾ ಸ್ಕೂಲಿನ ಎರಡನೇ ಬ್ಯಾಚ್‍ಗೆ ಕ್ಷಣಗಣನೆ!

Public TV
2 Min Read
Tarun Shivappa

ಕನ್ನಡ ಚಿತ್ರರಂಗದ ಯಶಸ್ವಿ ಯುವ ನಿರ್ಮಾಪಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು ತರುಣ್ ಶಿವಪ್ಪ ಅವರದ್ದು. ಸಿನಿಮಾ ನಿರ್ಮಾಣ ಕೂಡಾ ಅತೀವವಾದ ಶ್ರದ್ಧೆ ಮತ್ತು ವ್ಯಾವಹಾರಿಕ ಅಂಶಗಳಾಚೆಗಿನ ಆಸಕ್ತಿ ಬೇಡುವ ಕೆಲಸ. ಅವುಗಳನ್ನು ತಮ್ಮದಾಗಿಸಿಕೊಂಡು ಒಂದಷ್ಟು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ತರುಣ್ ಶಿವಪ್ಪ ಇತ್ತೀಚೆಗೆ ಸಿನಿಮಾ ಸ್ಕೂಲ್ ಆರಂಭಿಸಿದ್ದರು. ಎಲ್ಲ ಥರದಲ್ಲಿಯೂ ಸನ್ನದ್ಧಗೊಂಡ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಡಮಾಡುವ ಸದುದ್ದೇಶದಿಂದ ಈ ಸಿನಿಮಾ ಸ್ಕೂಲ್ ಆರಂಭವಾಗಿತ್ತು. ಇದೀಗ ಅದರ ಎರಡನೇ ಬ್ಯಾಚ್ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ.

Tarun Shivappa

ಸುಳಿವಿಲ್ಲದೆ ಅಮರಿಕೊಂಡ ಕೊರೋನಾ ವೈರಸ್‍ನಿಂದಾಗಿ ಇಡೀ ಚಿತ್ರರಂಗ ಸ್ಥಗಿತಗೊಂಡಿದೆ. ತಿಂಗಳುಗಳ ಕಾಲ ಮತ್ತೆ ಕಾರ್ಯಾರಂಭ ಮಾಡೋ ನಿರೀಕ್ಷೆಯಿಂದ ಕದವರೆಲ್ಲ ಮತ್ತೆ ಅಖಾಡಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಓರ್ವ ನಿರ್ಮಾಪಕರಾಗಿ ಮುಂದಿನ ಸಿನಿಮಾಗಳಿಗೆ ತಯಾರಿ ನಡೆಸಿಕೊಳ್ಳುತ್ತಿರೋ ತರುಣ್ ಶಿವಪ್ಪ ಸಿನಿಮಾ ಸ್ಕೂಲಿನ ಕಾರ್ಯಚಟುವಟಿಕೆಗಳತ್ತಲೇ ಪ್ರಧಾನವಾಗಿ ಗಮನ ಹರಿಸುತ್ತಿದ್ದಾರೆ.

ತರುಣ್ ಶಿವಪ್ಪ ಬಲು ಮಹತ್ವಾಕಾಂಕ್ಷೆಯಿಂದ ಆರಂಭಿಸಿದ್ದ ಸಿನಿಮಾ ಸ್ಕೂಲ್ ಅನ್ನು ಚಾಲೆಂಜಿಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿ ಉದ್ಘಾಟಿಸಿದ್ದರು. ನಿರೀಕ್ಷೆಗೂ ಮೀರಿ ಕರ್ನಾಟಕದ ನಾನಾ ಭಾಗಗಳಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಇಪ್ಪತ್ತು ಜನರನ್ನು ಆಯ್ಕೆ ಮಾಡಿ ಮೊದಲ ಬ್ಯಾಚ್‍ನ ತರಗತಿಗಳನ್ನು ಆರಂಭಿಸಲಾಗಿತ್ತು. ಇನ್ನೇನು ಅದು ಮುಕ್ತಾಯವಾಗಬೇಕು ಎಂಬಷ್ಟರಲ್ಲಿ ಕೊರೋನಾ ಮಹಾಮಾರಿ ಒಕ್ಕರಿಸಿದ್ದರಿಂದ ತರಗತಿಗಳು ಸ್ಥಗಿತಗೊಂಡಿದ್ದವು. ಇನ್ನೇನು ಮೊದಲ ಬ್ಯಾಚಿನ ಬಾಕಿ ಉಳಿದ ಕಾರ್ಯಚಟುವಟಿಕೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುತ್ತೆ. ಆ ನಂತರ ಎರಡನೇ ಬ್ಯಾಚ್ ಕಾರ್ಯಾರಂಭ ಮಾಡಲಿದೆ.

Tarun Shivappa a

ನಾಗರಬಾವಿಯ ನಮ್ಮೂರ ತಿಂಡಿ ಹಿಂಭಾಗದಲ್ಲಿರುವ ಸೆವೆನ್ ವಂಡರ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರೋ ಸಿನಿಮಾ ಸ್ಕೂಲ್‍ಗೆ ಭದ್ರವಾದ ತಳಹದಿಯಿದೆ. ಸಿನಿಮಾ ರಂಗದ ಒಳಹೊರಗನ್ನು ಆಳವಾಗಿ ಅರಿತುಕೊಂಡಿರುವ ತರುಣ್ ಶಿವಪ್ಪ ನುರಿತವರಿಂದ ನಿರ್ದೇಶನ, ನಟನೆ ಸೇರಿದಂತೆ ಎಲ್ಲ ವಿಭಾಗಗಳ ತರಬೇತಿಯನ್ನೂ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಸಿನಿಮಾ ತರಬೇತಿಯೆಂದರೆ ಹೀಗಿರಬೇಕು ಎಂಬಷ್ಟು ಅಚ್ಚುಕಟ್ಟಾಗಿ ಈ ಸಿನಿಮಾ ಶಾಲೆಯ ಕಾರ್ಯವೈಖರಿಗಳಿದ್ದಾವೆ.

Tarun Shivappa 1

ಈ ಸಿನಿಮಾ ಸ್ಕೂಲಿನಿಂದ ಎಲ್ಲ ರೀತಿಯಲ್ಲಿಯೂ ಹದಗೊಂಡ ಪ್ರತಿಭೆಗಳು ಆಗಮಿಸಲಿದ್ದಾವೆಂಬ ನಂಬಿಕೆ ಚಿತ್ರರಂಗದಲ್ಲಿದೆ. ಈ ಕಾರಣದಿಂದಲೇ ತರುಣ್ ಶಿವಪ್ಪ ಸಾರಥ್ಯದ ಸಿನಿಮಾ ಶಾಲೆಯಲ್ಲಿ ಕಲಿಯಬೇಕೆಂಬ ಇಂಗಿತ ಹೊಂದಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲ ನಿಟ್ಟಿನಲ್ಲಿಯೂ ಸುಸಜ್ಜಿತವಾಗಿರೋ ಸಿನಿಮಾ ಶಾಲೆಯ ಎರಡನೇ ಬ್ಯಾಚಿನ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಇಷ್ಟರಲ್ಲಿಯೇ ಆರಂಭವಾಗಲಿದೆ. ಆಸಕ್ತರು #40, ಎರಡನೇ ಮಹಡಿ, ನಮ್ಮೂರ ತಿಂಡಿ ಹತ್ತಿರ, ಎನ್ ಜಿ ಇ ಎಫ್ ಲೇಔಟ್ ಪಾರ್ಕ್ ಎದುರು, ನಾಗರಬಾವಿ ಬೆಂಗಳೂರು- 560072. ಮೊ:92069 20689- ಆಸಕ್ತರು ಈ ವಿಳಾಸದಲ್ಲಿರುವ ಸಿನಿಮಾ ಸ್ಕೂಲ್ ಅನ್ನು ಸಂಪರ್ಕಿಸಬಹುದು.

Tarun Shivappa b

Share This Article
Leave a Comment

Leave a Reply

Your email address will not be published. Required fields are marked *