ಲಕ್ನೋ: ಹಾಡಹಗಲಿನಲ್ಲಿಯೇ ಸಹಪಾಠಿ ಮೇಲೆ ಗೆಳೆಯನೇ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಜಾನ್ಸಿಯ ಬಿಕೆಡಿ ಕಾಲೇಜಿನಲ್ಲಿ ನಡೆದಿದೆ. ಬಳಿಕ ಆರೋಪಿ ಯುವತಿಯೊಬ್ಬಳ ಮನೆಗೆ ನುಗ್ಗಿ ಆಕೆಯ ಮೇಲೂ ಗುಂಡು ಹಾರಿಸಿದ್ದಾನೆ.
ಈ ಕುರಿತಂತೆ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಮಂಥನ್ ಸಿಂಗ್ ಎಂದು ಗುರುತಿಸಿದ್ದಾರೆ. ಆರೋಪಿ ಮಂಥನ್ ತನ್ನ ಸ್ನೇಹಿತ ಹುಕ್ಮೇಂದ್ರ ಗುರ್ಜರ್ ಮತ್ತು ಯುವತಿಗೆ ಆತ್ಮೀಯ ಸ್ನೇಹಿತನಾಗಿದ್ದು, ಕೆಲವು ಮನಸ್ತಾಪಗಳಿಂದ ಆರೋಪಿ ಇಬ್ಬರೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಅಲ್ಲದೆ ಸ್ನೇಹಿತ ಹುಕ್ಮೇಂದ್ರ ಗುರ್ಜರ್ ತನ್ನ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾನೆ ಎಂದು ಆರೋಪಿ ಮಂಥನ್ ಸಿಂಗ್ ತಪ್ಪು ಗ್ರಹಿಸಿಕೊಂಡಿದ್ದಾನೆ ಎಂದು ಹೇಳಿದರು.
Advertisement
Advertisement
ಇದರಿಂದ ಕೋಪಗೊಂಡು ಮಂಥನ್ ಸಿಂಗ್, ತರಗತಿ ನಡೆಯುತ್ತಿದ್ದ ವೇಳೆ ಕೊಠಡಿಗೆ ಪ್ರವೇಶಿಸಿ ಹುಕ್ಮೇಂದ್ರ ಗುರ್ಜರ್(22) ಎಂಬ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ್ದಾನೆ. ಹುಕ್ಮೇಂದ್ರ ಜಾನ್ಸಿಯ ಬಿಕೆಡಿ ಕಾಲೇಜಿನ ಎಂಎ ಮನಃಶಾಸ್ತ್ರ ವಿದ್ಯಾರ್ಥಿಯಾಗಿದ್ದಾನೆ. ಬಳಿಕ ಆರೋಪಿ ಮಂಥನ್ ಸಿಂಗ್ ಜಾನ್ಸಿಯ ಮಿಷನ್ ಕಾಂಪೌಂಡ್‍ನಲ್ಲಿರುವ ಸಿಪ್ರೀ ಬಜಾರ್ ಪ್ರದೇಶವನ್ನು ತಲುಪಿ ತ್ರಿಪಿಕಾ ಎಂಬ ಯುವತಿಯ ಮನೆಗೆ ನುಗ್ಗಿ ಅವಳ ಮೇಲೆ ಕೂಡ ಗುಂಡು ಹಾರಿಸಿದ್ದಾನೆ ಎಂದರು.
Advertisement
ಈ ಕುರಿತಂತೆ ಮಾತನಾಡಿದ ಜಾನ್ಸಿಯ ಎಸ್‍ಎಸ್‍ಪಿ ದಿನೇಶ್ ಕುಮಾರ್, ಆರೋಪಿ ಮಂಥನ್ ಬಿಡಿಕೆ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತನ್ನ ಸಹಪಾಠಿಯ್ನನು ಕಾಲೇಜು ಆವರಣದಲ್ಲಿ ಮತ್ತು ಒರ್ವ ಯುವತಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಬಳಿ ಇದ್ದ ಪಿಸ್ತೂಲ್‍ನನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
Advertisement
ಅಲ್ಲದೆ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಜಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಮತ್ತು ಯುವತಿ ಮೃತಪಟ್ಟಿದ್ದಾಳೆ ಎಂದು ಹೇಳಿದರು.