ಬೆಂಗಳೂರು: ಲಾಕ್‍ಡೌನ್ ಮಧ್ಯೆ ಹಲವು ನಿರ್ದೇಶಕರು, ಬರಹಗಾರರಿಗೆ ಒಳ್ಳೊಳ್ಳೆ ಐಡಿಯಾಗಳು ಬರುತ್ತಿದ್ದು, ಬಹುತೇಕ ಸಿನಿಮಾ ತಾರೆಯರು ಲಾಕ್‍ಡೌನ್ ಮಧ್ಯೆಯೇ ಹೊಸ ಸಿನಿಮಾಗಳಿಗೆ ಕಥೆಗಳನ್ನು ಹೆಣೆದಿದ್ದಾರೆ. ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆ ಫೀಲ್ಡ್‍ಗೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ಕೆಲಸ ಮಾಡಿದ್ದು, ಲಾಕ್‍ಡೌನ್ ಹೊತ್ತಲ್ಲಿ ಡಿ ಬಾಸ್‍ಗಾಗಿ ಮತ್ತೊಂದು ಕಥೆ ಹೆಣೆದಿದ್ದಾರೆ.
Advertisement
ರಾಜೇಂದ್ರ ಸಿಂಗ್ ಬಾಬು ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗಾಗಿ ಈಗಾಗಲೇ ಐತಿಹಾಸಿಕ ರಾಜ ವೀರ ಮದಕರಿ ನಾಯಕ ಚಿತ್ರ ಮಾಡುತ್ತಿದ್ದು, ಇದರ ಮಧ್ಯೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ದರ್ಶನ್ ಅಭಿನಯ ರಾಬರ್ಟ್ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಬೆನ್ನಲ್ಲೇ ರಾಜ ವೀರ ಮದಕರಿ ನಾಯಕ ಚಿತ್ರೀಕರಣಕ್ಕೆ ಯೋಜನೆ ರೂಪಿಸಿದ್ದಾರೆ. ಆದರೆ ಇದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ಸಿನಿಮಾ ತಯಾರಿ ಸ್ವಲ್ಪ ತಡವಾಗಬಹುದು. ಹೀಗಾಗಿ ಇದರ ಮಧ್ಯೆಯೇ ರಾಜೇಂದ್ರ ಸಿಂಗ್ ಬಾಬು ಹಾಗೂ ದರ್ಶನ್ ಜೋಡಿ ಮತ್ತೊಂದು ಸಿನಿಮಾ ಮಾಡಲು ತಯಾರಿ ನಡೆಸಿದೆ.
Advertisement
Advertisement
ಈ ಚಿತ್ರದಲ್ಲಿ ಡಿ ಬಾಸ್ ಅರಣ್ಯ ಅಧಿಕಾರಿ(ಐಎಫ್‍ಎಸ್) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಮೂಲಕ ಸುಧೀರ್ಘ ಸಮಯದ ಬಳಿಕ ಗಂಧದ ಗುಡಿ ಸಿನಿಮಾ ರೀತಿಯ ಪರಿಪೂರ್ಣ ಅರಣ್ಯ ಕಥಾನಕವಿರುವ ಸಿನಿಮಾ ಮಾಡಲು ರಾಜೇಂದ್ರ ಸಿಂಗ್ ಬಾಬು ಮುಂದಾಗಿದ್ದಾರೆ. ಇನ್ನೂ ವಿಶೇಷವೆಂದರೆ ಈ ಸಿನಿಮಾಗೆ ಗಂಧದ ಗುಡಿ ಎಂದೇ ಹೆಸರಿಡಲು ನಿರ್ಧರಿಸಿದ್ದಾರಂತೆ. ಅರಣ್ಯ ಹಾಗೂ ವನ್ಯ ಜೀವಿಗಳ ಕುರಿತು ಈಗಾಗಲೇ ಗಂಧದ ಗುಡಿ ಭಾಗ-1, ಭಾಗ-2 ಸಿನಿಮಾಗಳು ಬಂದಿದ್ದು, ಮೊದಲ ಭಾಗದಲ್ಲಿ ಡಾ.ರಾಜ್‍ಕುಮಾರ್ ಹಾಗೂ ವಿಷ್ಣುವರ್ಧನ್ ಕಾಣಿಸಿಕೊಂಡರೆ, ಎರಡನೇ ಭಾಗದಲ್ಲಿ ಶಿವರಾಜ್‍ಕುಮಾರ್ ನಟಿಸಿದ್ದರು. ಇದೀಗ ಹೊಸ ಚಿತ್ರ ಅಂತರಾಷ್ಟ್ರೀಯ ಗಂಧದ ಗುಡಿಯಾಗಿರಲಿದೆ ಎಂದು ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದ್ದಾರೆ.
Advertisement
ರಾಜೇಂದ್ರ ಸಿಂಗ್ ಬಾಬು ಅವರಿಗೆ ಈ ರೀತಿಯ ಸಿನಿಮಾ ಮಾಡುವ ಆಲೋಚನೆ ಹೊಳೆದದ್ದೇ ಅಚ್ಚರಿಯಂತಾಗಿದ್ದು, ಆಫ್ರಿಕಾ ಖಂಡದ ತಾಂಜೇನಿಯಾದ ಅರಣ್ಯದಲ್ಲಿನ ಬೇಟೆಯ ಹಾವಳಿಗಳ ಕುರಿತ ಪುಸ್ತಕಗಳನ್ನು ಓದುವಾಗ ಅವರಿಗೆ ಇಂತಹ ವಸ್ತು ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆ ಮೂಡಿದೆಯಂತೆ. ಹೀಗಾಗಿ ಈ ಕುರಿತು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಆಫ್ರಿಕಾ, ಹಾಂಕಾಂಗ್ ಮತ್ತು ಲಂಡನ್ ನಡುವೆ ಕಥೆ ಸಾಗಲಿದೆಯಂತೆ. ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ. ಹೀಗಾಗಿ ಇದನ್ನು ಅಂತರಾಷ್ಟ್ರೀಯ ಗಂಧದ ಗುಡಿ ಎಂದು ಕರೆಯಲಾಗಿದೆ. ಅಧಿಕಾರಿ ಪಾತ್ರದಲ್ಲಿ ಡಿ ಬಾಸ್ ಕಾಣಿಸಿಕೊಳ್ಳುವುದರಿಂದ ಆ್ಯಕ್ಷನ್ ಯಾವ ರೀತಿ ಇರಲಿದೆ ಎಂಬುದು ಅಭಿಮಾನಿಗಳ ಕುತೂಹಲ. ಅಲ್ಲದೆ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಹೀಗಾಗಿ ಐಎಫ್‍ಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.