ಧಾರವಾಡ: ಅತ್ಯಾಧುನಿಕ ಗೇಮ್ ಚೇಂಜರ್ ಯುದ್ಧ ವಿಮಾನ ರಫೇಲ್ ಭಾರತದಲ್ಲಿ ಲ್ಯಾಂಡ್ ಆಗಿದೆ. 5 ರಫೇಲ್ ವಿಮಾನಗಳು ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಮಧ್ಯಾಹ್ನ 3.10ರ ವೇಳೆಗೆ ಲ್ಯಾಂಡ್ ಆಯ್ತು. ಈ ಹಿನ್ನೆಲೆಯಲ್ಲಿ ಧಾರವಾಡ ಕಲಾವಿದ ಮಂಜುನಾಥ್ ವಿಭಿನ್ನವಾಗಿ ಸ್ವಾಗತ ಕೋರಿದ್ದಾರೆ.
Advertisement
ಹೌದು. ದೇಶದ ಯಾವುದೇ ಮೂಲೆಯಲ್ಲಿ ಏನೇ ಒಳ್ಳೆಯ ಕೆಲಸ ನಡೆಯಲಿ, ಅದರ ಬಗ್ಗೆ ತನ್ನ ಕಲೆಯ ಮೂಲಕ ಗೌರವ ಸಲ್ಲಿಸುವ ಧಾರವಾಡದ ಕಲಾವಿದ ಮಂಜುನಾಥ್ ಈ ಬಾರಿ ರಫೇಲ್ ವಿಮಾನ ದೇಶಕ್ಕೆ ಆಗಮಿಸಿದ ಬಗ್ಗೆ ತನ್ನ ಕಲೆಯನ್ನ ಪ್ರದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಕನಸು ನನಸು.. ಗೇಮ್ ಚೇಂಜರ್ ರಫೇಲ್ ಭಾರತದಲ್ಲಿ ಲ್ಯಾಂಡ್
Advertisement
Advertisement
ಫ್ರಾನ್ಸ್ ದೇಶದಿಂದ ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳು ಬಂದಿಳಿಯುತ್ತಿದ್ದಂತೆ ಧಾರವಾಡ ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ್ ಹಿರೇಮಠ ಅವರು ಧಾರವಾಡದಿಂದಲೇ ಆ ವಿಮಾನಗಳಿಗೆ ಕಲಾ ಸ್ವಾಗತ ಕೋರಿದ್ದಾರೆ. ಇದನ್ನೂ ಓದಿ: ರಫೇಲ್ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್ ಅಹ್ಮದ್
Advertisement
ಮರಳಿನಲ್ಲಿ (ಸ್ಯಾಂಡ್ ಆರ್ಟ್) ರಫೇಲ್ ಯುದ್ಧ ವಿಮಾನಗಳ ಚಿತ್ರ ಬಿಡಿಸಿ ‘ವೆಲ್ ಕಮ್ ರಫೇಲ್’ ಎಂದು ಬರೆದು ಆ ವಿಮಾನಗಳಿಗೆ ತಮ್ಮ ಕಲೆಯ ಮೂಲಕ ಸ್ವಾಗತ ಕೋರಿದರು. ಇದನ್ನೂ ಓದಿ: ವಿಜಯಪುರ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ ರಫೇಲ್ ಸಾರಥಿ