ಬೆಂಗಳೂರು: ರಾಕಿಂಗ್ ದಂಪತಿಯ ಪುತ್ರಿ ಐರಾ ತಮ್ಮನಿಗೆ ಮುದ್ದಾಗಿ ರಾಖಿ ಕಟ್ಟುತ್ತಿರುವ ಫೋಟೋವನ್ನು ನಟಿ ರಾಧಿಕಾ ಪಂಡಿತ್ ಅವರು ಹಮಚಿಕೊಂಡಿದ್ದಾರೆ.
ಇಂದು ಇಡೀ ಭಾರತದಲ್ಲಿ ರಕ್ಷಾಬಂಧನವನ್ನು ಆಚರಿಸಲಾಗುತ್ತಿದೆ. ಒಡಹುಟ್ಟಿದ ಸಹೋದರರು ಚೆನ್ನಾಗಿ ಇರಲಿ ಎಂದು ಹರಸಿ ಸಹೋದರಿಯರು ರಾಖಿ ಕಟ್ಟುತ್ತಾರೆ. ಅಂತಯೇ ಯಶ್ ಅವರ ಪುತ್ರಿ ಐರಾ ಕೂಡ ಮುದ್ದು ತಮ್ಮನಿಗೆ ರಾಖಿ ಕಟ್ಟಿ ಖುಷಿಪಟ್ಟಿದ್ದಾಳೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
https://www.instagram.com/p/CDbkuKngALF/
ಐರಾ ತನ್ನ ತಮ್ಮನಿಗೆ ಆರತಿ ಬೆಳಗಿ ರಾಖಿ ಕಟ್ಟುತ್ತಿರುವ ಎರಡು ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು, ಅವರ ಮೊದಲ ರಕ್ಷಾಬಂಧನ, ಒಡಹುಟ್ಟಿದವರ ಅಮೂಲ್ಯವಾದ ಬಂಧನಕ್ಕೆ ಬೆಲೆಕಟ್ಟು ಆಗಲ್ಲ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಜೂನಿಯರ್ ರಾಕಿಭಾಯ್ ಬಿಳಿ ಬಣ್ಣದ ಪೈಜಾಮ ತೊಟ್ಟು ಮಿಂಚುತ್ತಿದ್ದರೆ, ಮುದ್ದು ಬೇಬಿ ಐರಾ ಕೇಸರಿ ಮತ್ತು ಗಿಳಿ ಹಸಿರು ಬಣ್ಣದ ಬಟ್ಟೆ ತೊಟ್ಟುಕೊಂಡಿದ್ದಾಳೆ.
ಇಂದು ಬೆಳಗ್ಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದ ರಾಧಿಕಾ ಪಂಡಿತ್ ಅವರು, “ಈ ಬಾರಿ ರಾಖಿಯನ್ನು ಕಳುಹಿಸಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ ಚಿಕಾಗೋದಲ್ಲಿರುವ ನನ್ನ ಪ್ರೀತಿಯ ಗೌರಂಗ್‍ಗೆ ಎಲ್ಲ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ. ನೀನಿನ್ನೂ ನನ್ನ ಚಿಕ್ಕ ಮಗು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಗೊಲ್ಲು” ಎಂದು ರಾಧಿಕಾ ಸಹೋದರನ ಬಗ್ಗೆ ಬರೆದುಕೊಂಡಿದ್ದರು.
https://www.instagram.com/p/CDbo1rKHWDN/
ಸದಾ ಸಾಮಾಜಿಕ ಜಾಲತಾಣದಲ್ಲಿ ಯಶ್ ಮತ್ತು ರಾಧಿಕಾ ಸಕ್ರಿಯವಾಗಿ ಇರುತ್ತಾರೆ. ರಾಧಿಕಾ ಅಣ್ಣನಿಗಾಗಿ ವಿಶ್ ಮಾಡಿದರೆ, ಇತ್ತ ತಂಗಿಗಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಯಶ್ ಅವರು, ಹ್ಯಾಪಿ ರಕ್ಷಾಬಂಧನ ನಂದು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನನ್ನ ಎಲ್ಲ ಸಹೋದರ ಮತ್ತು ಸಹೋದರಿಯರಿಗೆ ಹ್ಯಾಪಿ ರಕ್ಷಾಬಂಧನ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.