ತಮಿಳು ಚಿತ್ರದಿಂದ 2021ರ ಸಿನಿಮಾ ಜರ್ನಿ ಆರಂಭಿಸಲಿದ್ದಾರೆ ಸತೀಶ್ ನೀನಾಸಂ

Public TV
1 Min Read
sathish ninasam official 1231192451462184172151668626385967213726909n

ಬೆಂಗಳೂರು: ನಟ ಸತೀಶ್ ನೀನಾಸಂ ಇದೀಗ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಬ್ಯುಸಿಯಾಗಿದ್ದು, ಐದಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ 2021ರ ಸಿನಿಮಾ ಜರ್ನಿಯನ್ನು ತಮಿಳಿನಲ್ಲಿ ಆರಂಭಿಸುತ್ತಿದ್ದಾರೆ.

sathish ninasam official 1290600584294073351038073633037470954702917n

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚುತ್ತಿದ್ದು, ನಟರೂ ಸಹ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಲು ತೊಡಗಿದ್ದಾರೆ. ಅದೇ ರೀತಿ ಇದೀಗ ಸತೀಶ್ ನೀನಾಸಂ ಸಹ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಮೂಲಕ ತಮ್ಮ 2021ರ ಸಿನಿಮಾ ಜರ್ನಿಯನ್ನು ತಮಿಳು ಸಿನಿಮಾದಿಂದ ಆರಂಭಿಸುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಸಹ ಸಂತಸಗೊಂಡಿದ್ದಾರೆ.

sathish ninasam official 1274478378126321195261655652622128404854756n

ನಿನಾಸಂ ಸತೀಶ್ ಸದ್ಯ ಸ್ಯಾಂಡಲ್‍ವುಡ್‍ನ 6 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕೆಲ ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದ್ದರೆ, ಇನ್ನೂ ಕೆಲ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಇಷ್ಟೆಲ್ಲ ಸಿನಿಮಾಗಳನ್ನು ಕೈಯ್ಯಲ್ಲಿಟ್ಟುಕೊಂಡಿರುವ ಸತೀಶ್ ಇದೀಗ ತಮಿಳಿನ ‘ಪಗೈವಾನುಕ್ಕು ಅರುಲ್ವಾಯ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ತಮಿಳಿನಲ್ಲಿಯೂ ಘರ್ಜಿಸಲು ಸಿದ್ಧತೆ ನಡೆಸಿದ್ದಾರೆ.

ಅನಿಶ್ ಅವರು ಚಿತ್ರಿವನ್ನು ನಿರ್ದೇಶಿಸುತ್ತಿದ್ದು, ಸಸಿಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ವರ್ಷಕ್ಕೆ ಚಿತ್ರೀಕರಣ ಆರಂಭಿಸುವುದಾಗಿ ಚಿತ್ರ ತಂಡ ತಿಳಿಸಿದೆ. ಅಂದಹಾಗೆ ಸಿನಿಮಾ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದು, ಬಹುತೇಕ ಭಾಗ ಜೈಲಿನಲ್ಲೇ ಚಿತ್ರೀಕರಣವಾಗಲಿದೆಯಂತೆ. ಸತೀಶ್ ನೀನಾಸಂ ಸಹ ಖೈದಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಸತೀಶ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜನವರಿ 5ರಿಂದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ತಾವೇ ವಾಯ್ಸ್ ಡಬ್ ಮಾಡಲು ತಮಿಳು ಭಾಷೆಯನ್ನು ಸಹ ಸತೀಶ್ ಕಲಿಯುತ್ತಿದ್ದಾರಂತೆ.

ಸತೀಶ್ ನೀನಾಸಂ ಸದ್ಯ ಮ್ಯಾಟ್ನಿ, ದಸರಾ, ಗೋದ್ರಾ, ಪೆಟ್ರೊಮ್ಯಾಕ್ಸ್, ಪರಿಮಳ ಲಾಡ್ಜ್ ಸೇರಿದಂತೆ ಹಲವು ಸ್ಯಾಂಡಲ್‍ವುಡ್ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಇದೀಗ ತಮಿಳು ಸಿನಿಮಾದಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಆದರೆ ಸಿನಿಮಾ ಯಾವ ರೀತಿ ಮೂಡಿಬರಲಿದೆ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *