ಚೆನ್ನೈ: 2021ರ ಜನವರಿ 1ರಿಂದ ತಮಿಳುನಾಡಿನ ಸರ್ಕಾರಿ ಕಚೇರಿಗಳು ವಾರದ 5 ದಿನ ಮಾತ್ರ ಕಾರ್ಯನಿರ್ವಹಿಸಲಿದೆ.
ಸದ್ಯ ಇರುವ 6 ದಿನದ ಬದಲಾಗಿ 5 ದಿನ ಶೇ.100 ರಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸುವ ಆದೇಶಕ್ಕೆ ಮುಖ್ಯ ಕಾರ್ಯದರ್ಶಿ ಕೆ.ಷಣ್ಮುಗಂ ಸಹಿ ಹಾಕಿದ್ದಾರೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮೇ ತಿಂಗಳಿನಲ್ಲಿ ವಾರದ 6 ದಿನ ಸರ್ಕಾರಿ ಕಚೇರಿಗಳು ತೆರೆಯಬೇಕು. ಅರ್ಧ ಉದ್ಯೋಗಿಗೊಂಡು ಒಂದು ದಿನ ಹಾಜರಾದರೆ ಉಳಿದ ಅರ್ಧ ಸಂಖ್ಯೆಯ ಉದ್ಯೋಗಿಗಳು ಮರು ದಿನ ಹಾಜರಾಗಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು.
ಸೆಪ್ಟೆಂಬರ್‌ನಲ್ಲಿ ಎಲ್ಲ ಸಿಬ್ಬಂದಿ ಕಚೇರಿಗೆ ಹಾಜರಾಗಬೇಕೆಂದು ಸರ್ಕಾರ ಸೂಚಿಸಿತ್ತು. ತಮಿಳುನಾಡಿನಲ್ಲಿ ಒಟ್ಟು 7,06,136 ಮಂದಿಗೆ ಸೋಂಕು ಬಂದಿದ್ದು, ಒಟ್ಟು 10,893 ಮಂದಿ ಬಲಿಯಾಗಿದ್ದರೆ. 6,63,456 ಮಂದಿ ಗುಣಮುಖರಾಗಿದ್ದು, 31,787 ಸಕ್ರಿಯ ಪ್ರಕರಣಗಳಿವೆ.