ಚೆನ್ನೈ: ತಮಿಳುನಾಡು ಸರ್ಕಾರ ಆನ್‍ಲೈನ್ ಕ್ಲಾಸ್‍ಗಾಗಿ ಪ್ರತಿದಿನ 2ಜಿಬಿ ಡೇಟಾವನ್ನು ಉಚಿತವಾಗಿ ನೀಡುವ ಮೂಲಕ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. 2021 ಜನವರಿ ತಿಂಗಳಿನಿಂದ 2021ರ ಎಪ್ರಿಲ್ ತಿಂಗಳವರೆಗೆ ಫ್ರೀ ಡೇಟಾ ನೀಡಲು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರ ನಿರ್ಧರಿಸಿದೆ.
ಕೊರೊನಾದಿಂದಾಗಿ ಶಾಲಾ ಕಾಲೇಜುಗಳು ಇನ್ನೂ ಮುಚ್ಚಲ್ಪಟ್ಟಿರುವುದರಿಂದ ತರಗತಿಗಳು ಆನ್‍ಲೈನ್‍ನಲ್ಲಿ ನಡೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳ ಆನ್‍ಲೈನ್ ತರಗತಿಗೆ ನೆರವಾಗುವ ಉದ್ದೇಶದಿಂದ 2 ಜಿಬಿ ಡೇಟಾವನ್ನು ಉಚಿತವಾಗಿ ನೀಡಲು ಮುಂದಾಗಿದ್ದು ಒಟ್ಟು 9.69 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
Advertisement
Advertisement
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಲೆ ಮತ್ತು ವಿಜ್ಞಾನ ಕಾಲೇಜುಗಳು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸ್ಕಾಲರ್‌ಶಿಪ್ -ಫಂಡೆಡ್ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಈ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯ ಅನ್ವಯ ಮುಂದಿನ ನಾಲ್ಕು ತಿಂಗಳು ಪ್ರತಿ ದಿನ 2 ಜಿಬಿ ಡೇಟಾ ಸರ್ಕಾರ ಒದಗಿಸಲಿದೆ.
Advertisement
ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2020ರ ಡಿಸೆಂಬರ್ 2 ರಿಂದ ಮತ್ತು ಪದವಿಪೂರ್ವ ಕಾಲೇಜು, ಮೆಡಿಕಲ್ ಕಾಲೇಜುಗಳನ್ನು 2020ರ ಡಿಸೆಂಬರ್ 7 ರಂದು ಪ್ರಾರಂಭಿಸಿರುವ ತಮಿಳುನಾಡು ಸರ್ಕಾರ ಪದವಿ ಪೂರ್ವ ತರಗತಿಗಳು ಮತ್ತು ಪ್ರಥಮ ಪದವಿ ತರಗತಿಗಳನ್ನು ಮುಂದಿನ ತಿಂಗಳ ಮೊದಲ ವಾರದಿಂದ ಆರಂಭಿಸಲು ನಿರ್ಧಾರ ಮಾಡಿಕೊಂಡಿದೆ.