– ಧಾರಾಪುರಂದಲ್ಲಿ ಮೋದಿಗೆ ಮುನಿರತ್ನ ಸ್ವಾಗತ
ಚೆನ್ನೈ/ತಿರುವನಂತಪುರಂ: ಪಂಚ ರಾಜ್ಯಗಳಲ್ಲಿ ಮತದಾರರ ಮನಗೆಲ್ಲಲು ಅಬ್ಬರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳ, ತಮಿಳುನಾಡು, ಪುದುಚ್ಚೆರಿಯಲ್ಲಿ ರ‍್ಯಾಲಿ ಮೇಲೆ ರ‍್ಯಾಲಿ ನಡೆಸಿದ್ರು.
ಪಾಲಕ್ಕಾಡ್‍ನಲ್ಲಿ ಭಾಷಣ ಮಾಡಿದ ಮೋದಿ, ಎಲ್‍ಡಿಎಫ್ ಮತ್ತು ಯುಡಿಎಫ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಆಪಾದಿಸಿದರು. ನಂತರ ತಮಿಳುನಾಡಿನ ಧಾರಾಪುರಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಮೋದಿ, ಸಿಎಂ ಪಳನಿಸ್ವಾಮಿ ತಾಯಿ ಕುರಿತು ಡಿಎಂಕೆಯ ಎ ರಾಜ ಹೇಳಿಕೆ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡ್ರು.
1989ರಲ್ಲೇ ಜಯಲಲಿತಾರನ್ನು ಡಿಎಂಕೆ ಅಪಮಾನಿಸಿತ್ತು ಎಂಬುದನ್ನು ನೆನಪಿಸಿದ್ರು. ಏಪ್ರಿಲ್ 1ರಂದು ನಡೆಯೋ 2ನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಸಿಎಂ ಮಮತಾ ಸ್ಪರ್ಧೆ ಮಾಡಿರುವ ನಂದಿಗ್ರಾಮಕ್ಕೂ ನಾಡಿದ್ದೇ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೊನೆಯ ದಿನವಾದ ಇಂದು ಮಮತಾ ಮತದಾರರ ಮನ ಗೆಲ್ಲಲು ಭಾರೀ ಕಸರತ್ತು ನಡೆಸಿದ್ರು.
ಮತ್ತೊಂದೆಡೆ ನಂದಿಗ್ರಾಮದಲ್ಲೇ ಅಮಿತ್ ಶಾ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ರು. ಅಮಿತ್ ಶಾ ಕಾರ್ಯಕ್ರಮ ಸ್ಥಳವನ್ನು ಮಮತಾ ರೋಡ್ ಶೋ ಮೂಲಕ ಹಾದುಹೋದ್ರು. ಈ ಸಂದರ್ಭದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ದೀದಿಗೆ ಮುಜುಗರ ಉಂಟು ಮಾಡಲು ನೋಡಿದ್ರು. ಮಮತಾ ರೋಡ್ ಶೋಗೆ ಅಡ್ಡಿಪಡಿಸಲು ನೋಡಿದ್ರು.
ಇತ್ತ ತಮಿಳುನಾಡಿನ ಅವರಕುರಿಚ್ಚಿ ವಿಧಾನಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಾಜಿ ಐಪಿಎಸ್ ಅಣ್ಣಾಮಲೈ ಪರವಾಗಿ ಪ್ರಚಾರ ನಡೆಸಲು ಆಗಮಿಸಿದ ಪ್ರಧಾನಿ ಮೋದಿಗೆ ಶಾಸಕ ಮುನಿರತ್ನ ಸ್ವಾಗತ ಕೋರಿದ್ರು. ಧಾರಪುರಂನ ಹೆಲಿಪ್ಯಾಡ್‍ನಲ್ಲಿ ಆರ್‍ಆರ್ ನಗರ ಶಾಸಕ ಮುನಿರತ್ನ, ಮೋದಿಗೆ ಶಾಲು ಹೊದಿಸಿ ಬರಮಾಡಿಕೊಂಡ್ರು