ಧಾರವಾಡ: ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಾಕ್ಸಿನ್‍ಗಾಗಿ ಜನ ಗಲಾಟೆ ಆರಂಭ ಮಾಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಳಿಗ್ಗೆ 6 ಗಂಟೆಯಿಂದಲೇ ಇಲ್ಲಿ ಬಂದು ಸರದಿಯಲ್ಲಿ ನಿಂತಿದ್ದರು. ಆದರೆ ವ್ಯಾಕ್ಸಿನ್ ಕೊಡಬೇಕಾದ ಸಿಬ್ಬಂದಿ ತಮಗೆ ಬೇಕಾದವರಿಗೆ ಮಾತ್ರ ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಿ ವ್ಯಾಕ್ಸಿನ್ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Advertisement
ವ್ಯಾಕ್ಸಿನ್‍ಗಾಗಿ ಮುಂಜಾನೆ ಬಂದು ಕಾದು ನಿಂತು ಸುಸ್ತಾದ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿ ಜೊತೆ ಗಲಾಟೆ ಮಾಡಿ ಆಸ್ಪತ್ರೆ ಒಳಗೆ ನುಗ್ಗಿದ್ದಾರೆ. ಕೆಲವರು ನಿನ್ನೆ ಕೂಡಾ ವ್ಯಾಕ್ಸಿನ್ ಗಾಗಿ ಬಂದು ವಾಪಸ್ ಆಗಿದ್ದಾರೆ. ಆದರೆ ನಿನ್ನೆ ವ್ಯಾಕ್ಸಿನ್ ಸಿಗದ ಹಿನ್ನೆಲೆ ಇವತ್ತು ಬಂದು ಸಾಲಿನಲ್ಲಿ ನಿಂತಿದ್ದರು. ಆದರೆ ಇಂದು ಕೂಡ ವ್ಯಾಕ್ಸಿನ್ ಸಿಗದೆ ಇದ್ದಾಗ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅರಣ್ಯದಲ್ಲಿ ಕಾಣೆಯಾಗಿದ್ದ 110ರ ವೃದ್ಧ ನಾಲ್ಕು ದಿನಗಳ ಬಳಿಕ ಪತ್ತೆ
Advertisement
Advertisement
ಧಾರವಾಡ ಜಿಲ್ಲೆಯಲ್ಲಿ ಇಂದು 7 ಸಾವಿರ ಕೊವ್ಯಾಕ್ಸಿನ್ ಹಾಗೂ 7 ಸಾವಿರ ಕೋವಿಶೀಲ್ಡ್ ಮಾತ್ರ ಸ್ಟಾಕ್ ಇವೆ. ಹೀಗಾಗಿ ಈ ವ್ಯಾಕ್ಸಿನ್ ಕೇವಲ ವಿದ್ಯಾರ್ಥಿಗಳಿಗೆ ಹಾಗೂ ಎರಡನೇ ಡೊಸ್ ಇದ್ದವರಿಗೆ ಮಾತ್ರ ಆರೋಗ್ಯ ಇಲಾಖೆ ನೀಡಲು ಸೂಚನೆ ನೀಡಿದೆ. ಹೀಗಾಗಿ 45 ವರ್ಷದ ಮೇಲ್ಪಟ್ಟ ಜನ ಮೊದಲ ಡೊಸ್ ಪಡೆಯಲು ಬಂದು ವಾಪಸ್ ಆಗುವಂತೆ ಆಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
Advertisement