ಚಿಕ್ಕೋಡಿ(ಬೆಳಗಾವಿ): ಕುಂದಾನಗರಿ ಬೆಳಗಾವಿಗೆ ತಬ್ಲಿಘಿ, ಅಜ್ಮೀರ್ ಬಳಿಕ ಹೊಸದಂದು ಕಂಟಕ ಶುರುವಾಗಿದೆ. ಒಂದು ಸಮುದಾಯದ ನಂಟಿಂದ ಬರೋಬ್ಬರಿ 13 ಕೇಸ್ ಕೊರೊನಾ ಪಾಸಿಟಿವ್ ಆಗಿದೆ.
ಕುಂದಾನಗರಿ ಬೆಳಗಾವಿಗೆ ಈಗ ತಬ್ಲಿಘಿ, ಅಜ್ಮೀರ್ ಬಳಿಕ ಜಾರ್ಖಂಡ್‍ನಲ್ಲಿರುವ ಜೈನ ಸಮುದಾಯದ ಪವಿತ್ರ ಸ್ಥಳಕ್ಕೆ ಹೋದವರು ಕಂಟಕವಾಗಿದ್ದಾರೆ. ಅಥಣಿ ತಾಲೂಕಿನಲ್ಲಿ ಕೊರೊನಾ ಸ್ಫೋಟಗೊಂಡಿದ್ದು ಒಂದೇ ದಿನ 13 ಕೇಸ್ ದಾಖಲಾಗಿದೆ. ಜೈನರ ಪುಣ್ಯಸ್ಥಳ ಶಿಖರ್ಜಿಯಲ್ಲಿರುವ ಬಸದಿಗೆ ಹೋಗಿ ಬಂದವರಲ್ಲಿ 13 ಮಂದಿಗೆ ಪಾಸಿಟಿವ್ ಬಂದಿದೆ.
Advertisement
Advertisement
ಅಥಣಿ ತಾಲೂಕಿ ಸವದಿ, ಬೆಳವಕ್ಕಿ, ನಂದಗಾಂವ, ಝಂಜರವಾಡ ಗ್ರಾಮದಲ್ಲಿ 13 ಕೇಸ್ ಪತ್ತೆಯಾಗಿ ಭಾರೀ ಆತಂಕ್ಕೀಡುಮಾಡಿದೆ. ಲಾಕ್‍ಡೌನ್ ಸ್ಟಾರ್ಟ್ ಆಗೋಕು ಮುನ್ನವೇ ಅಥಣಿ ಹಾಗೂ ಕಾಗವಾಡ ತಾಲೂಕಿನ ಜೈನ ಸಮುದಾಯದ 44 ಮಂದಿ ಜಾಖಂಡ್‍ಗೆ ಭೇಟಿ ನೀಡಿದ್ರು. ಬಳಿಕ ಅಲ್ಲಿಂದ ಅಥಣಿಗೆ ಮೇ.6ರಂದು ವಾಪಸ್ ಆಗಿದ್ರು. ಅದಾದ ಬಳಿಕ ಅಷ್ಟೂ ಜನರನ್ನ ಮೇ 6 ರಿಂದ ಮೇ.20ರ ವರೆಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ವಿವಿಧ ಶಾಲೆಗಳಲ್ಲಿ ಇರಿಸಲಾಗಿತ್ತು. ಅದರಲ್ಲಿನ 13 ಜನರಿಗೆ ಇಂದು ಕೊರೊನಾ ಪಾಸಿಟಿವ್ ಧೃಡವಾಗಿದೆ.
Advertisement
Advertisement
ಜಿಲ್ಲಾಡಳಿತದಿಂದ ಎಡವಟ್ಟು!
ಜಾರ್ಖಂಡ್‍ನಿಂದ ವಾಪಸ್ಸಾಗಿದ್ದ ಈ 44 ಮಂದಿಯನ್ನ ಕ್ವಾರಂಟೈನ್‍ನಲ್ಲೇನೋ ಇರಿಸಲಾಗಿತ್ತು. ಆದರೆ ಕೊರೊನಾ ಪರೀಕ್ಷೆ ರಿಪೋರ್ಟ್ ಬರೋದಕ್ಕೂ ಮೊದಲೇ ಕ್ವಾರಂಟೈನ್‍ನಲ್ಲಿದ್ದವರನ್ನ ಬಿಡುಗಡೆ ಮಾಡಿ ಜಿಲ್ಲಾಡಳಿತ ಎಡವಟ್ಟು ಮಾಡಿದೆ. ಈ ಮಧ್ಯೆ ಕೆಲವರು ಪ್ರಭಾವ ಬಳಸಿ ತಮ್ಮ ಮನೆಗಳು ಸೇರಿದಂತೆ ಜೈನ ಸಮುದಾಯದವರು ಆಯೋಜಿಸದ್ದ ಪೂಜೆಯಲ್ಲೂ ಭಾಗಿಯಾಗಿದ್ದರು. ಈ ಪೂಜೆಯಲ್ಲಿ ನೂರಾರು ಜನ ಜೈನ ಸಮುದಾಯದವರು ಭಾಗಿಯಾಗಿದ್ರು. ಸದ್ಯ ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡಲಾಗಿದೆ. ಒಟ್ಟಿನಲ್ಲಿ ಅಥಣಿ ತಾಲೂಕಿನ 4 ಗ್ರಾಮಗಳು ಸಂಕಷ್ಟ ಎದುರಿಸುವಂತಾಗಿದೆ.