‘ತಪ್ಪದೆ ಬಿಸಿ ನೀರು ಕುಡಿಯಿರಿ’ – ಆಸ್ಪತ್ರೆಯಿಂದ ಬಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು

Public TV
1 Min Read
dhruva sarja and wife corona positive

ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಮನೆಗೆ ಬಂದ ಧ್ರುವ ಸರ್ಜಾ ಲೈವ್‍ಗೆ ಬಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಜುಲೈ 15 ರಂದು ಗೊತ್ತಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇದೀಗ ಮನೆಯಲ್ಲಿ ವರ್ಕೌಟ್ ಮಾಡುತ್ತಿರುವಾಗ ಇನ್‍ಸ್ಟಾಗ್ರಾಂ ಮೂಲಕ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

Dhruva Sarja 2

ಮನೆಯಲ್ಲಿ ಟ್ರೆಡ್‍ಮೀಲ್ ಮೇಲೆ ನಡೆಯುತ್ತಾ ಲೈವ್‍ನಲ್ಲಿ ಮಾತನಾಡಿದ ಧ್ರುವ ಸರ್ಜಾ, ನಾನು ಮತ್ತು ಪ್ರೇರಣಾ ಆರೋಗ್ಯವಾಗಿದ್ದೇವೆ. ಕ್ಯಾಲರಿ ಕರಗಿಸಬೇಕಾಗಿದೆ ಎಂದ ಧ್ರುವ ಸರ್ಜಾ ಮನೆಯಲ್ಲಿಯೇ ಟ್ರೆಡ್‍ಮಿಲ್ ಇತ್ತು ಹಾಗಾಗಿ ವರ್ಕೌಟ್ ಮಾಡುತ್ತಿದ್ದೀನಿ. ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅಷ್ಟೆ. ಪ್ರೇರಣಾ ಅವರಿಗೂ ವರ್ಕೌಟ್ ಮಾಡಿಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಅತ್ತಿಗೆ ಮೇಘನಾ ಬಗ್ಗೆಯೂ ಮಾತನಾಡಿ, ಮೇಘನಾ ಕೂಡ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಡಿ. ನಾವು ಬೇಗ ಗುಣಮುಖರಾಗಿ ಮನೆಯಿಂದ ಹೊರಗೆ ಬರುತ್ತೇವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

ಈ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಾಗೃತರಾಗಿರಿ ಎಂದು ಅಭಿಮಾನಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. “ತಪ್ಪದೆ ಪ್ರತಿದಿನ ಬಿಸಿ ನೀರು ಕುಡಿಯಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಎಲ್ಲರೂ ಖುಷಿಯಾಗಿ ಇರಬೇಕು ಅಷ್ಟೇ. ಈ ಕೊರೊನಾವನ್ನು ಒಟ್ಟಾಗಿ ಸೇರಿ ಓಡಿಸೋಣ” ಎಂದು ಧ್ರುವ ಸರ್ಜಾ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *