– ಪವಾಡ ರೀತಿಯಲ್ಲಿ ಪಾರಾದ ಬಾಲಕ
– ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮುಂಬೈ: ಪುಟ್ಟ ಕಂದಮ್ಮವೊಂದು ಪವಾಡ ರೀತಿಯಲ್ಲಿ ಪಾರಾದ ಅಚ್ಚರಿಯ ಘಟನೆ ಮುಂಬೈನ ಮಲ್ವಾನಿ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಇದೇ ತಿಂಗಳ 11 ರಂದು ನಡೆದಿದೆ. ಸದ್ಯ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಡಿಯೋದಲ್ಲೇನಿದೆ?
ಮೂರು ವರ್ಷದ ಬಾಲಕ ಮನೆ ಮುಂದೆ ತನ್ನ ಪಾಡಿಗೆ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ಬಂದ ಕಾರು ಆತನ ಮೇಲೆಯೇ ಹರಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಘಟನೆಯಿಂದ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇರಿಸಿಕೊಂಡಿದ್ದಾನೆ. ಅಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಪ್ರಕರಣ ಸಂಬಂಧ ಕಾರು ಡ್ರೈವರ್ ವಿರುದ್ಧ ಕೇಸ್ ದಾಖಲಾಗಿದೆ.
2018ರಲ್ಲಿ ಮುಂಬೈನಲ್ಲಿ ಇಂತದ್ದೇ ಘಟನೆಯೊಂದು ನಡೆದಿತ್ತು. ಯುವಕನೊಬ್ಬ ತನ್ನ ಗೆಳೆಯೊಂದಿಗೆ ಫುಟ್ಬಾಲ್ ಆಡುತ್ತಿದ್ದನು. ಈ ವೇಳೆ ಯುವತಿಯೊಬ್ಬಳು ಡ್ರೈವ್ ಮಾಡುತ್ತಿದ್ದ ಕಾರು ಆತನ ಮೇಲೆ ಹರಿದಿತ್ತು. ಆದರೂ ಯಾವುದೇ ಗಾಯಗಳಾಗದೆ ಯುವಕ ಅಚ್ಚರಿಯೆಂಬಂತೆ ಪಾರಾಗಿದ್ದನು. ಈ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
#WATCH Maharashtra: A car ran over a 3-year-old child while he was playing outside his house in Mumbai's Malvani area. (11.09.2020)
The child survived the accident and has been discharged from hospital. Police have registered a case against the driver. pic.twitter.com/rdI7xbzqpg
— ANI (@ANI) September 16, 2020