ವಿಜಯಪುರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜೋಡಿ ಕೊಲೆಯೊಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ನಡೆದಿದೆ.
ರುದ್ರಪ್ಪ ಆಲಮೇಲ(35) ಹಾಗೂ ಈರಮ್ಮ ಆಲಮೇಲ(30) ಕೊಲೆಯಾದವರು. ಈರಮ್ಮಳ ಪತಿ ಲಕ್ಷ್ಮಣನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ.
ನಿನ್ನೆ ತಡರಾತ್ರಿ ಈರಮ್ಮ ಹಾಗೂ ಆಕೆಯ ಮೈದುನ ರುದ್ರಪ್ಪ ತೋಟದ ಮನೆಯಲ್ಲಿ ಜೊತೆಗಿದ್ದಿದ್ದನ್ನ ಕಣ್ಣಾರೆ ಕಂಡ ಈರಮ್ಮಳ ಪತಿ ಲಕ್ಷ್ಮಣ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ.
ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಲಕ್ಷ್ಮಣ ಪರಾರಿಯಾಗಿದ್ದಾನೆ.