ತನ್ನ ಜೊತೆ ಮಲಗಲು ಒಪ್ಪದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿ ಬೆಂಕಿ ಹಚ್ಚಿದ!

Public TV
1 Min Read
TELANGANA

– ಆಸ್ಪತ್ರೆಯಲ್ಲಿ ತಂದೆಗೆ ಘಟನೆ ವಿವರಿಸಿದ ಅಪ್ರಾಪ್ತೆ

ಹೈದರಾಬಾದ್: ತನ್ನ ಜೊತೆ ಮಲಗು ಎಂದಾಗ ಒಪ್ಪದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿ, ಬೆಂಕಿಯಿಟ್ಟ ಅಮಾನವೀಯ ಘಟನೆಯೊಂದು ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.

POLICE 1

ಬಾಲಕಿ ಕಾಮುಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆಯಿಂದ ಬಾಲಕಿಯ ದೇಹ ಶೇ.70ರಷ್ಟು ಸುಟ್ಟು ಹೋಗಿದ್ದು, ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದ್ದಾಳೆ. ಈ ಘಟನೆ ಸೆಪ್ಟೆಂಬರ್ 18ರಂದು ನಡೆದಿದ್ದು, ಅಕ್ಟೋಬರ್ 5ರಂದು ಬೆಳಕಿಗೆ ಬಂದಿದೆ. ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಗೆ ಪ್ರಜ್ಞೆ ಬಂದ ಬಳಿಕ ಆಕೆ ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿದ ಬಳಿಕ ವಿಚಾರ ಬಯಲಾಗಿದೆ.

Police Jeep 1 1 medium

ಖಮ್ಮಮ್ ಜಿಲ್ಲೆಯ ಪಲ್ಲೆಗುಡೆಮ್ ಗ್ರಾಮದ ಬಾಲಕಿ ಮನೆಗೆಲಕ್ಕೆಂದು ಹೋಗುತ್ತಿದ್ದಳು. ಇದನ್ನೇ ಉಪಯೋಗಿಸಿಕೊಂಡ ಮನೆ ಮಾಲೀಕನ ಮಗ ತನ್ನ ಜೊತೆ ಮಲಗುವಂತೆ ಹೇಳಿದ್ದಾನೆ. ಬಾಲಕಿ ಈತನ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಇತ್ತ ಬಾಲಕಿ ಕಾಮುಕನ ಮಾತನನ್ನು ನಿರಾಕರಿಸಿದಾಗ ಆತನ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಕಾಮುಕ ಆಕೆಯ ಬಟ್ಟೆಯನ್ನು ಹರಿದು ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

police 1 e1585506284178 2 medium

ನಾನು ಕೋಣೆಯಲ್ಲಿ ಇದ್ದಾಗ ಆತ ಅಲ್ಲಿಗೆ ಬಂದು ನನ್ನ ಜೊತೆ ಮಲಗು ಎಂದು ಹೇಳಿದ್ದಾನೆ. ಆದರೆ ನಾನು ಆತನ ಮಾತನ್ನು ನಿರಾಕರಿಸಿದೆ. ಈ ವೇಳೆ ಆತ ನನ್ನನ್ನು ಬಲವಂತ ಮಾಡಲು ಆರಂಭಿಸಿದ್ದು, ಆತನಿಂದ ತಪ್ಪಿಸಿಕೊಳ್ಳಲು ತುಂಬಾನೆ ಪ್ರಯತ್ನ ಪಟ್ಟೆ. ಆಗ ಆತ ನನ್ನ ಬಟ್ಟೆ ಹರಿದು ಬೆಂಕಿ ಹಚ್ಚಿ ಓಡಿ ಹೋಗಿದ್ದಾನೆ ಎಂದು ಸಂತ್ರಸ್ತೆ ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾಳೆ.

Police Jeep

ಸ್ವತಃ ಆರೋಪಿಯೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ ಎಂದು ಖಮ್ಮಮ್ ಪೊಲೀಸ್ ಆಯುಕ್ತ ತಫ್ಸೀರ್ ಇಕ್ವಾಲ್ ಹೇಳಿದ್ದಾರೆ. ಆದರೆ ಬಾಲಕಿಯ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article