ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್‍ನಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ನಟ ದರ್ಶನ್ ಭೇಟಿ ನೀಡಿದ್ದಾರೆ.
ಧಾರವಾಡ ನಗರದ ಶಿವಗಿರಿಯಲ್ಲಿರುವ ಮನೆಗೆ ತಡರಾತ್ರಿ ಭೇಟಿ ನೀಡಿದ ಡಿ ಬಾಸ್, ವಿನಯ ಕುಟುಂಬ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದರು. ನಿನ್ನೆ ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾ ಆಡಿಯೋ ರೀಲಿಸ್‍ಗಾಗಿ ಆಗಮಿಸಿದ್ದ ನಟ ದರ್ಶನ್, ಮಧ್ಯಾಹ್ನವೇ ಕುಲಕರ್ಣಿ ಮನೆಗೆ ಭೇಟಿ ಮಾಡ್ತಾರೆ ಎಂದು ಮಾಹಿತಿ ಇತ್ತು.
ಈ ಹಿನ್ನೆಲೆ ದರ್ಶನ್ ಅಭಿಮಾನಿಗಳು ವಿನಯ ಮನೆ ಬಳಿ ಬಂದು ಕಾದು ಕುಳಿತಿದ್ರು. ಆದರೆ ದರ್ಶನ್ ತಡ ರಾತ್ರಿ 12 ಗಂಟೆಗೆ ವಿನಯ ಕುಟುಂಬಕ್ಕೆ ಭೇಟಿ ಮಾಡಿದ್ದಾರೆ. ವಿನಯ್ ಹಾಗೂ ದರ್ಶನ್ ಗೆಳೆತನ ಬಹಳ ವರ್ಷಗಳಿಂದ ಇದ್ದು, ದರ್ಶನ್ ಧಾರವಾಡಕ್ಕೆ ಬಂದರೆ, ವಿನಯ ಕುಲಕರ್ಣಿ ಹಾಲಿನ ಡೇರಿಯಲ್ಲೇ ಉಳಿದುಕೊಳ್ಳುತಿದ್ದರು.