ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ಬಂದ ಬಳಿಕ ಒಂದೊಂದೇ ಅವಾಂತರಗಳು ಸೃಷ್ಟಿಯಾಗುತ್ತಿವೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಈ ಮಧ್ಯೆ ಮಹಾಲಕ್ಷ್ಮಿ ಲೇಔಟ್‍ನ ಶ್ರೇಯಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಲೀಕೇಜ್ ಆಗಿದೆ.
Advertisement
ಹೌದು. ತಡರಾತ್ರಿ ಆಕ್ಸಿಜನ್ ಫ್ಲಾಂಟ್‍ನಲ್ಲಿ ಲೀಕೇಜ್ ಆಗಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಶ್ರೇಯಸ್ ಆಸ್ಪತ್ರೆಯ ಐಸಿಯುನಲ್ಲಿ ಸುಮಾರು 30ಕ್ಕೂ ಹೆಚ್ಚು ರೋಗಿಗಗಳು ಇದ್ದರು. ಈ ವೇಳೆ ದಿಢೀರನೆ ಎದುರಾದ ಆಕ್ಸಿಜನ್ ಕೊರತೆ ಉಂಟಾಗಿದೆ.
Advertisement
Advertisement
ಇತ್ತ ಅಗ್ನಿಶಾಮಕ ದಳದ ಜೊತೆಗೆ ಮಾಹಿತಿ ತಿಳಿದ ತಕ್ಷಣವೇ ಸೋನು ಸೂದ್ ಚಾರಿಟೆಬಲ್ ಟ್ರಸ್ಟ್ ಆಸ್ಪತ್ರೆಗೆ ದೌಡಾಯಿಸಿದೆ. 6 ಜಂಬೋ ಸಿಲಿಂಡರ್ ತಂದು ಆಸ್ಪತ್ರೆಗೆ ಟ್ರಸ್ಟ್ ಕೊಟ್ಟು ಭಾರೀ ಅವಘಡ ತಪ್ಪಿಸಿದಂತಾಗಿದೆ. ಸಹಾಯ ಮಾಡಿದ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಗೆ ಆಸ್ಪತ್ರೆ ಧನ್ಯವಾದ ಸಲ್ಲಿಸಿದೆ.
Advertisement
ಈ ಹಿಂದೆ ಚಾಮರಾಜನಗರದಲ್ಲಿ ಆಕಿಜನ್ ಸಿಗದೇ ಸುಮಾರು 24 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ರಾಜಕೀಯ ನಾಯಕರು ಮಾತ್ರ ಆಕ್ಸಿಜನ್ ಸಿಗದೆ ಮೃತಪಟ್ಟಿಲ್ಲ ಎಂದು ಸಮರ್ಥನೆಗಿಳಿದಿದ್ದರು. ಇದಾದ ನಂತರ ಆಂಧ್ರಪ್ರದೆಶದಲ್ಲಿಯೂ ಆಕ್ಸಿಜನ್ ಬರೋದು 5 ನಿಮಿಷ ತಡವಾದ್ದರಿಂದ ಐಸಿಯುನಲ್ಲಿದ್ದ ಸುಮಾರು 11 ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಈ ಬೆನ್ನಲ್ಲೇ ಅಲ್ಲಿನ ಜನ ಸಿಎಂ ಜಗನ್ ವಿರುದ್ಧ ರೊಚ್ಚಿಗೆದ್ದಿದ್ದು, ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.