ಬೆಂಗಳೂರು: ನಾಳೆಯಿಂದ ಹತ್ತನೇ ತರಗತಿ ಪರೀಕ್ಷೆ ನಡೆಯಲಿದೆ. ಕೊರೊನಾ ವೈರಸ್ ಭಯದ ನಡುವೆಯೇ ಎಕ್ಸಾಂ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸಿಕೊಂಡು ಮಕ್ಕಳು ಧೈರ್ಯವಾಗಿ ಪರೀಕ್ಷೆ ಬರೆಯಿರಿ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮುನ್ನ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ನುರಿತ ತಜ್ಞರು ವಿವರಿಸಿದ್ದಾರೆ. ತಜ್ಞರ ಸಲಹೆ ಪಾಲಿಸಿದ್ರೆ ಕೊರೊನಾ ಆತಂಕ ಮಾಯವಾಗಬಹುದು.
Advertisement
Advertisement
ತಜ್ಞರು ಕೊಟ್ಟಿರುವ ಸಲಹೆ ಏನು..?
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು. ವಿದ್ಯಾರ್ಥಿಗಳು ಸ್ನೇಹಿತರ ಜೊತೆ ಗುಂಪು ಗುಂಪು ಚರ್ಚೆಯಲ್ಲಿ ತೊಡಗಿಸಿಕೊಳ್ಳಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಧ್ಯವಾದಷ್ಟು ಬೇಗ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ. ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಿಮ್ಮ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಕುಳಿತುಕೊಳ್ಳಿ.
Advertisement
ಮಾಸ್ಕ್ ಧರಿಸಿ ಪರೀಕ್ಷೆ ಬರೆಯೋದು ಕಿರಿಕಿರಿ ಎನಿಸಿದಲ್ಲಿ ಆಗಾಗ ಮಾಸ್ಕ್ ತೆಗೆಯಿರಿ. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದಲೇ ಕುಡಿಯುವ ನೀರು ತೆಗೆದುಕೊಂಡು ಹೋಗುವುದು ಉತ್ತಮ. ವಿದ್ಯಾರ್ಥಿಗಳೇ ಸಾಧ್ಯವಾದರೆ ನಿಮ್ಮ ಬಳಿ ಸ್ಯಾನಿಟೈಸರ್ ಇಟ್ಟುಕೊಳ್ಳಿ. ಆಗಾಗ ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳಿ.
Advertisement
ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಪರೀಕ್ಷಾ ಸಿಬ್ಬಂದಿಗೆ ತಿಳಿಸಿ. ಅಲ್ಲದೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಿರಿ. ಪರೀಕ್ಷೆ ಮುಗಿದ ನಂತರವೂ ಗುಂಪು ಗುಂಪಾಗಿ ಹೊರಗೆ ಬರಬೇಡಿ. ಸಾಮಾಜಿಕ ಅಂತರ ಪಾಲನೆ ಮಾಡಿ. ಪರೀಕ್ಷಾ ಹಿಂದಿನ ದಿನ ಮಿತವಾದ ಊಟ ಮಾಡಿ. ಕಣ್ಣು ತುಂಬಾ ನಿದ್ರೆ ಮಾಡಿ. ಸ್ಪೈಸಿ ಪದಾರ್ಥಗಳನ್ನ ಎಕ್ಸಾಂ ಮುಗಿಯೋವರೆಗೂ ತಿನ್ನೊದನ್ನು ಕಡಿಮೆ ಮಾಡಿಕೊಳ್ಳಿ. ಪರೀಕ್ಷಾ ಕೇಂದ್ರಕ್ಕೆ ಬರೋವಾಗ ಸಾರಿಗೆ ವ್ಯವಸ್ಥೆ ಬಗ್ಗೆ ಜಾಗೃತರಾಗಿರಿ.
ಸಾಧ್ಯವಾದಷ್ಟು ತಮ್ಮ ತಮ್ಮ ಖಾಸಗಿ ವಾಹನಗಳನ್ನು ಉಪಯೋಗಿಸಿ. ಸಾಮೂಹಿಕ ಸಾರಿಗೆ ಉಪಯೋಗ ಮಾಡೋರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಸೋಂಕಿತರಿದ್ದರೆ, ಕ್ವಾರೈಂಟೇನ್‍ನಲ್ಲಿದ್ದರೆ ಕೂಡಲೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ. ಪರೀಕ್ಷೆ ಬರೆಯದ ಪರಿಸ್ಥಿತಿ ಇದ್ದರೆ ಚಿಂತೆ ಬೇಡ. ಪೂರಕ ಪರೀಕ್ಷೆಯಲ್ಲಿ ನಿಮಗೆ ಅವಕಾಶ ಸಿಗುತ್ತೆ.
ಪರೀಕ್ಷೆ ಆತಂಕದಿಂದ ವಿದ್ಯಾರ್ಥಿಗಳು ಕೆಟ್ಟ ನಿರ್ಧಾರಗಳನ್ನು ಮಾಡೋದು ಬೇಡ. ಈ ಪರೀಕ್ಷೆ ಬರೆಯದೇ ಹೋದ್ರು ಚಿಂತೆ ಇಲ್ಲ. ಇನ್ನೊಂದು ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಸರಿ ಇಲ್ಲದೆ ಹೋದ್ರೆ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿ.
ಒಟ್ಟಿನಲ್ಲಿ ಕೊರೊನಾ ಭೀಕರತೆಯ ಮಧ್ಯೆಯೂ ಸರ್ಕಾರ ಪರೀಕ್ಷೆ ನಡೆಸಲು ತೀರ್ಮಾನ ಮಾಡಿದ್ದು, ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆಯಿರಿ ಅನ್ನೊದೇ ಎಲ್ಲರ ಆಶಯ.