ಚಿಕ್ಕಬಳ್ಳಾಪುರ: ಸಂಭವನೀಯ ಕೋವಿಡ್ ಮೂರನೇ ಅಲೆ ತಡೆಯಲು ಸರ್ಕಾರ ಸರ್ವ ಸಿದ್ಧತೆಗಳನ್ನ ಮಾಡಿಕೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
Advertisement
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಸಧ್ಯ ಬ್ಲ್ಯಾಕ್ ಫಂಗಸ್ ಗೆ ಔಷಧಿ ಕೊರತೆ ಇಲ್ಲ. ನಿನ್ನೆ 8,700 ವಯಲ್ಸ್ ಲೈಫೋಜೋಮಲ್ ಅಂಪಿಟೆರಿಸನ್ ರಾಜ್ಯಕ್ಕೆ ಬಂದಿದೆ. ಇದುವರೆಗೂ 18,000 ವಯಲ್ಸ್ ರಾಜ್ಯಕ್ಕೆ ಬಂದಿದೆ. 2-3 ದಿನದಿಂದ ಔಷಧಿ ಸರಬರಾಜು, ಪೂರೈಕೆ ಚೆನ್ನಾಗಿ ಆಗುತ್ತಿದೆ. ಈ ವಾರದಲ್ಲಿ ಸಹ ಹೆಚ್ಚು ಔಷಧ ಸರಬರಾಜು ಆಗಲಿದೆ. ರೆಮ್‍ಡಿಸಿವಿರ್ ನ ಸಮಸ್ಯೆ ಬಗೆಹರಿದಂತೆ ಈ ಸಮಸ್ಯೆ ಸಹ ಬಗೆಹರಿದು ಔಷಧಿ ಸಿಗಲಿದೆ. ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ- ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತಿದೆ ಎಂದರು.
Advertisement
Advertisement
ಮತ್ತೊಂದೆಡೆ ಮೂರನೇ ಅಲೆ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮತಿ ರಚನೆ ಮಾಡಲಾಗಿದೆ. 12-13 ಮಂದಿ ಹೆಸರಾಂತ ವೈದ್ಯರು, ಮಕ್ಕಳ ಮಾನಸಿಕ ತಜ್ಞರು ಸಮತಿಯಲ್ಲಿ ಇದ್ದಾರೆ. 0-12-18 ವರ್ಷದವರಗೆ ಯಾವ ರೀತಿ ಕೊರೊನಾ ಭಾಧಿಸಲಿದೆ? ಯಾವ ರೀತಿ ಚಿಕಿತ್ಸೆ ಕೊಡಬೇಕು ಎಂದು ಎಲ್ಲಾ ಆಯಾಮಗಳಲ್ಲಿ ಅಧ್ಯಯನ ಮಾಡಿ ಶೀಘ್ರವೇ ವರದಿ ನೀಡಲಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ ಕ್ರಮ, ಸಿದ್ಧತೆಗಳನ್ನ ಮಾಡಿಕೊಳ್ಳಲಿದೆ ಎಂದರು.