ವಿಜಯಪುರ/ಮಂಡ್ಯ: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆ ಆದ ಹಿನ್ನೆಲೆ ವಿಜಯಪುರದ ಆಲಮಟ್ಟಿ ಜಲಾಯಕ್ಕೆ ಒಳಹರಿವು ಕಡಿಮೆ ಆಗಿದೆ. ಸದ್ಯ ಒಳಹರಿವು 1,80,000 ಕ್ಯೂಸೆಕ್ ದಾಖಲಾಗಿದ್ದು, 1,80,000 ಕ್ಯೂಸೆಕ್ ನೀರನ್ನ ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ.
ಇನ್ನು ಗರಿಷ್ಠ 123 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 92.59 ಟಿಎಂಸಿ ನೀರು ಸಂಗ್ರಹವಾಗಿದೆ. ಭಾನುವಾರ 2 ಲಕ್ಷ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಇಂದು ಒಳಹರಿವು ಕಡಿಮೆ ಆದ ಹಿನ್ನೆಲೆ ಆತಂಕ ಕಡಿಮೆ ಆಗಿದೆ.
Advertisement
Advertisement
ಕೆಆರ್‍ಎಸ್ ನಿಂದ 74 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸಿರುವ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ ಪ್ರವಾಹದ ಆತಂಕದಲ್ಲಿ ಇವೆ. ಈಗಾಗಾಲೇ ರಂಗನತಿಟ್ಟಿನಲ್ಲಿ ಇರುವ ಬಹುತೇಕ ದ್ವೀಪಗಳು ನೀರಿನಲ್ಲಿ ಮುಳುಗಡೆಯಾಗಿವೆ. ಪಕ್ಷಿಗಳು ಆತಂಕದಿಂದ ಮರದ ಮೇಲ್ಭಾಗದಲ್ಲಿ ಇವೆ. ನೀರು ರಂಗನತಿಟ್ಟಿನ ಬೋಟಿಂಗ್‍ವರೆಗೂ ಬಂದಿದೆ.
Advertisement
Advertisement
ಕೆಆರ್‍ಎಸ್ ಡ್ಯಾಂ ನ ನೀರಿನ ಮಟ್ಟ 119.47 ಅಡಿಗಳಿದ್ದು, ಒಳಹರಿವು-77,950 ಕ್ಯೂಸೆಕ್ ಮತ್ತು ಹೊರ ಹರಿವು-74,560 ಕ್ಯೂಸೆಕ್ ಇದೆ. ಡ್ಯಾಂ ನ ಗರಿಷ್ಠ ಮಟ್ಟ 124.80 ಅಡಿ ಇದೆ.