– 2 ಕೋಟಿ ಬಂಗಲೆಯಲ್ಲಿ ನಗನಾಣ್ಯ ಪತ್ತೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣ ದಿನದಿಂದ ದಿನ್ಕಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸದ್ಯ ಮೃತ ಮಧುಸಾಗರ್ ಬರೆದ ಡೆತ್ ನೋಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಹೌದು. ತಿಗಳರಪಾಳ್ಯದ ಐವರ ಆತ್ಮಹತ್ಯೆ ರಹಸ್ಯ ಬಗೆದಷ್ಟು ಬಯಲಾಗ್ತಿದೆ. ಡೆತ್ ನೋಟ್ ಬರೆದಿಟ್ಟು ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಸಿಂಚನಾ, ಸಿಂಧುರಾಣಿ, ಮಧುಸಾಗರ್ ಹೀಗೆ ಪ್ರತಿಯೊಬ್ಬರೂ ಡೆತ್‍ನೋಟ್ ಬರೆದಿದ್ದಾರೆ. ಈ ಮೂಲಕ ಶಂಕರ್ ಹಾಗೂ ಅಳಿಯಂದಿರ ಪಾಲಿಗೆ ಇದು ಕಂಟಕವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಮೂವರ ಡೆತ್‍ನೋಟ್‍ನ ಮುಖಪುಟದಲ್ಲಿ ಒಂದೇ ರೀತಿಯ ಫೋಟೋ ಹಾಕಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಶಂಕರ್, ಇಬ್ಬರು ಅಳಿಯಂದಿರ ವಿರುದ್ಧ ದೂರು ದಾಖಲು
Advertisement
Advertisement
ಶಂಕರ್‌ಗೆ ಡೆತ್‍ನೋಟ್ ಕಂಟಕ..?: ನಮ್ಮ ಸಾವಿಗೆ ತಂದೆ ಶಂಕರ್ ಅವರೇ ಕಾರಣ. ನಮ್ಮಪ್ಪ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಪದೇ ಪದೇ ಹಣಕ್ಕಾಗಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು. ತಾಯಿ ಭಾರತಿಯನ್ನ ಸಂತೋಷವಾಗಿ ಬದುಕಲು ಬಿಟ್ಟಿರಲಿಲ್ಲ. ಹೀಗಾಗಿ ಗಂಡನ ಮನೆಯಲ್ಲಿಯೂ ಕಿರುಕುಳ, ತಂದೆ ಮನೆಯಲ್ಲೂ ಕಿರುಕುಳ ಅನುಭವಿಸುತ್ತಿದ್ದೇವೆ. ಮನೆ ಸಮಸ್ಯೆಗಳ ಬಗೆಹರಿಸುವ ಗೋಜಿಗೆ ತಂದೆ ಹೋಗ್ತಿರಲಿಲ್ಲ. ಗಂಡನ ಮನೆಯಲ್ಲಿ ಅತ್ತೆ, ಮಾವಂದಿರು ಬದುಕಲು ಬಿಡಲಿಲ್ಲ. ಇತ್ತ ನಮ್ಮ ಮನೆಯಲ್ಲಿ ತಂದೆಯೇ ಸಂತೋಷವಾಗಿ ಬದುಕೋದಕ್ಕೆ ಬಿಡಲಿಲ್ಲ ಎಂದೆಲ್ಲ ಡೆತ್ ನೋಟ್ ನಲ್ಲಿ ಮಕ್ಕಳು ತಮ್ಮ ತಂದೆಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್
Advertisement
ಕೆಜಿಗಟ್ಟಲೇ ಚಿನ್ನಾಭರಣ ಪತ್ತೆ: ಇತ್ತ ಪ್ರಕರಣ ಸಂಬಂಧ ತನಿಖೆಗೆ ತೆರಳಿರುವ ಪೊಲೀಸರಿಗೆ ಶಂಕರ್ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನಾಭರಣ ಪತ್ತೆಯಾಗಿದೆ. 15 ಲಕ್ಷ ರೂ. ನಗದು, ಚೆಲ್ಲಾಪಿಲ್ಲಿ ಆಗಿರುವ ಹರಿದ ನೋಟುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಣ ಹಾಗೂ ಚಿನ್ನಾಭರಣದ ಬಗ್ಗೆ ಐಟಿಗೆ ತಿಳಿಸಲು ಚಿಂತನೆ ನಡೆಸಿದ್ದಾರೆ. ಶಂಕರ್ ಮನೆಯಲ್ಲಿ ರಾಶಿರಾಶಿ ಆರ್ ಟಿಐ ಚೀಟಿ ಕೂಡ ಪತ್ತೆಯಾಗಿವೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ- ಐದು ದಿನ ಅನ್ನ, ನೀರಿಲ್ಲದೆ ಬದುಕುಳಿದ ಎರಡೂವರೆ ವರ್ಷದ ಕಂದಮ್ಮ