ಮನೆಯ ಸ್ಪರ್ಧಿಗಳು ಅವರ ಜೀವನದಲ್ಲಿ ಮರೆಯಲಾಗದ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶವನ್ನು ಬಿಗ್‍ಬಾಸ್ ಕೊಟ್ಟಿದ್ದರು. ಈ ವೇಳೆ ಎಲ್ಲ ಸ್ಪರ್ಧಿಗಳು ಅವರ ಜೀವನದ ಕಥೆಯನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
Advertisement
ಸ್ಟ್ರಾಂಗ್ ಮ್ಯಾನ್ ರಾಜೀವ್ ಹಿಂದೆ ಇದೆ ಕರುಣಾಜನಕ ಕಥೆ!
Advertisement
ಎಲ್ಲ ಸ್ಪರ್ಧಿಗಳಿಗಿಂದ ಸ್ಟ್ರಾಂಗ್ ಎಂಬಂತೆ ಕಾಣಿಸಿಕೊಳ್ಳುವ ರಾಜೀವ್ ಅವರ ಹಿಂದೆ ನೋವಿನ ಕಥೆಯೆ ಅಡಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಅಂದು ನರಳಿದ ದಿನವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ತಂದೆಯ ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಇಟ್ಟುಕೊಂಡಿರುವ ರಾಜೀವ್, 2 ವರ್ಷಗಳ ಕಾಲ ತಂದೆಯ ಜೊತೆಗೆ ಮಾತನಾಡದೆ ಇರುವುದನ್ನು ಬಿಚ್ಚಿಟ್ಟಿದ್ದರಿಂದ ಸಹಸ್ಪರ್ಧಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.
Advertisement
Advertisement
ನನ್ನ ಜೀವನದ ಮೊದಲ ಹೀರೋ ಎಂದರೆ ನಮ್ಮ ತಂದೆ. ನಾನು ಅವರೊಂದಿಗೆ ಮಾತನಾಡದೆ ಸರಿಸುಮಾರು 2 ವರ್ಷಗಳಾಯಿತ್ತು. ಅವರು 1996 ರಲ್ಲಿ ಫೋಟೋ ತೆಗೆಸಿಕೊಳ್ಳಲು ಹೋದಾಗ ಇದು ನನ್ನ ಕೊನೆಯ ಫೋಟೋ ಎಂದು ಹೇಳಿದ್ದರು. ನಾನು ಚಿಕ್ಕವನಾಗಿದ್ದೆ ನನಗೆ ಅವರು ಯಾಕೆ ಹೀಗೆ ಹೇಳುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಬಾತ್ ರೂಮ್‍ಗೆ ಒಂದು ದಿನ ಹೋಗಿ ನೋಡುತ್ತೇನೆ ಬಾತ್ ರೂಮ್ ಪೂರ್ತಿ ರಕ್ತವಾಗಿತ್ತು. ಅಲ್ಸರ್ ಕೊಲೈಟಿಸ್ ಎಂಬ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಅವರು ತಮಗೆ ಕಾಯಿಲೆ ಇರುವ ವಿಚಾರವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಮತ್ತೊಂದು ದಿನ ಬಾತ್ ರೂಮ್‍ನಲ್ಲಿ ಒಂದು ಗ್ಲಾಸ್ ಇತ್ತು. ಯಾಕೆ ಎಂದು ಯೋಚನೆ ಮಾಡಿದಾಗ ಯಾರೋ ಅವರಿಗೆ ಅವರದ್ದೇ ಮೂತ್ರ ಕುಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಹೇಳಿದ್ದರಂತೆ.
ನಾನು ಅವರೊಂದಿಗೆ 2 ವರ್ಷಗಳಿಂದ ಮಾತುನಾಡುತ್ತಿಲ್ಲ. ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ನನ್ನದೇ ಆಗಿರುವ ನೋವಿದೆ ಆದರೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ನಾನು ಇಲ್ಲಿಗೆ ಬರುವ ಮುಂಚೆಯೂ ಅವರೊಂದಿಗೆ ಸರಿಯಾಗಿ ಮಾತನಾಡಿ ಬರಲಿಲ್ಲ. ನಾನು ಇಲ್ಲಿಂದಲೆ ಅವರಿಗೆ ಕ್ಷಮೆ ಕೆಳುತ್ತೇನೆ ಎಂದು ಹೇಳುತ್ತಾ ಗಳಗಳನೆ ಕಣ್ಣೀರು ಹಾಕಿದ್ದಾರೆ.
ಬಿಗ್ ಮನೆಯ ಸದಸ್ಯರ ಹಿಂದೆ ಒಂದೊಂದು ಕಣ್ಣೀರಿನ ಕಥೆಗಳಿವೆ. ಸಮಯಕ್ಕೆ ಅನುಗುಣವಾಗಿ ಅವರ ನೋವು , ಸಂತೋಷ ಒಂದೊಂದಾಗಿಯೇ ಹೊರಗೆ ಬರುತ್ತಿದೆ. ರಾಜೀವ್ ಅವರ ಜೀವನ ಕಥೆ ಕೇಳಿದ ಪ್ರತಿಯೊಬ್ಬ ಮನೆಯ ಸದಸ್ಯನೂ ಅವರವರ ಕುಟುಂಬವನ್ನು ನೆನಪು ಮಾಡಿಕೊಂಡು ಕಣ್ಣೀರು ಸುರಿಸಿದ್ದಾರೆ.