– ಮದ್ವೆಗೂ ಮುನ್ನ ಗೆಳೆಯನ ಮನೆಯಲ್ಲಿದ್ದ ಯುವತಿ
ದಿಸ್ಪುರ್: ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ಹುಡುಗಿಯ ಮೇಲೆ ಆಕೆಯ ಪ್ರಿಯತಮ ಹಾಗೂ ಆತನ ತಂದೆಯೇ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಧೂಲೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 19 ವರ್ಷದ ಹುಡುಗಿಯ ಮೇಲೆ ಆಕೆಯ ಪ್ರಿಯತಮ ಹಾಗೂ ಆತನ ತಂದೆ ಅತ್ಯಾಚಾರಗೈದಿದ್ದಾರೆ. ಸಂತ್ರಸ್ತೆಯ ಪ್ರಿಯತಮನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪ್ರೀತಮ್‍ನಾತ್ ಹಾಗೂ ಈತನ ತಂದೆ ಪಂಚುನಾತ್ ಎಂದು ಗುರುತಿಸಲಾಗಿದೆ.
ಆರು ತಿಂಗಳ ಹಿಂದೆ ಪ್ರೀತಮ್‍ನನ್ನು ನಾನು ಪ್ರೀತಿಸಲು ಆರಂಭಿಸಿದೆ. ನವೆಂಬರ್‍ನಲ್ಲಿ ವಿವಾಹ ಮಾಡಲು ಅವರು ನಿರ್ಧರಿಸಿದ್ದರು. ಹೀಗಾಗಿ ಅಕ್ಟೋಬರ್ 8ರಂದು ಪ್ರೀತಮ್ ಮನೆಗೆ ಹೋಗಿದ್ದೆ. ಅಲ್ಲದೆ ವಿವಾಹವಾಗುವ ವರೆಗೆ ಬೇರೆ ಬೇರೆ ರೂಮ್‍ಗಳಲ್ಲೇ ಇರಬೇಕು ಎಂದು ಈ ಜೋಡಿ ನಿರ್ಧರಿಸಿತ್ತು. ಮಾತನಾಡಿಕೊಂಡಂತೆ ಹುಡುಗಿ ಪ್ರತ್ಯೇಕ ರೂಮ್‍ನಲ್ಲಿ ವಾಸವಿದ್ದು, ಈ ವೇಳೆ ಪ್ರೀತಮ್ ಹಾಗೂ ಆತನ ತಂದೆ ಅತ್ಯಾಚಾರಗೈದಿದ್ದಾರೆ.
ಘಟನೆ ನಂತರ ನವೆಂಬರ್ 6ರಂದು ಹುಡುಗಿ ತನ್ನ ತವರು ಮನೆಗೆ ಬಂದಿದ್ದು, ಘಟನೆ ಕುರಿತು ಕುಟುಂಬಸ್ಥರಿಗೆ ವಿವರಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ನವೆಂಬರ್ 10ರಂದೇ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣವನ್ನು ಸಹ ದಾಖಲಿಸಿದ್ದಾರೆ. ಆದರೆ ಮುಂದೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ, ಪೊಲೀಸರು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿಲ್ಲ. ದೂರು ದಾಖಲಿಸಿ ಒಂದು ವಾರ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸಂತ್ರಸ್ತೆ ಕುಟುಂಬಸ್ಥರು ಆರೋಪಿಸಿದ್ದಾರೆ.