– ಸಹೋದರಿಯರ ಶಿಕ್ಷಣಕ್ಕೆ ನೆರವು
ಮುಂಬೈ: ಕೊರೊನಾ ಲಾಕ್‍ಡೌನ್ ಕಾರಣದಿಂದ ಕೆಲಸ ಕಳೆದುಕೊಂಡ ತಾಯಿಯ ನೆರವಿಗೆ ಬಂದ 14 ಬಾಲಕ ಟೀ ಮಾರಾಟ ಮಾಡಲು ಆರಂಭಿಸಿದ್ದಾನೆ. ಆ ಮೂಲಕ ತನ್ನ ಇಬ್ಬರೂ ಸಹೋದರಿಯರ ಶಿಕ್ಷಣಕ್ಕೆ ನೆರವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಭೆಂಡಿ ಬಜಾರ್ ಪ್ರದೇಶದ ಅಂಗಡಿಯಲ್ಲಿ ಚಹಾ ತಯಾರಿಸುವ ಬಾಲಕ ಸುಭಾನ್, ಹತ್ತಿರದ ಪ್ರದೇಶಗಳಲ್ಲಿ ಟೀ ಮಾರಾಟ ಮಾಡುತ್ತಾನೆ. ಬಾಲಕನಿಗೆ ಯಾವುದೇ ಟೀ ಅಂಗಡಿ ಇಲ್ಲದ ಕಾರಣ ಆತ ಜನರ ಬಳಿಯೇ ತೆರಳಿ ಟೀ ಮಾರಾಟ ಮಾಡುತ್ತಿದ್ದಾನೆ.
ತನ್ನ ಕುಟುಂಬದ ಕುರಿತು ಮಾತನಾಡಿರುವ ಬಾಲಕ, ನನ್ನ ತಾಯಿ ಶಾಲಾ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಶಾಲೆಗಳು ಮುಚ್ಚಿರುವುದರಿಂದ ಕೆಲಸವಿಲ್ಲ. ಇದರಿಂದ ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಭೆಂಡಿ ಬಜಾರ್ ಅಂಗಡಿಯಲ್ಲಿ ಚಹಾ ಮಾಡಿ, ನಾಗಪಾಡ, ಭೆಂಡಿ ಬಜಾರ್ ಪ್ರದೇಶಗಳಲ್ಲಿ ಮಾರಾಟ ಮಾಡುತ್ತೇನೆ. ದಿನಕ್ಕೆ 300-400 ರೂ. ಗಳಿಸುತ್ತೇನೆ. ಇದು ನನ್ನ ತಾಯಿಗೆ ಕೊಡುತ್ತೇನೆ ಎಂದು ತಿಳಿಸಿದ್ದಾನೆ.
Mumbai: A 14-year-old boy, Subhan sells tea to support his family after his mother’s earnings stopped, amid #COVID19 pandemic. She worked as a school bus attendant. He says, “My father died 12 years ago. My sisters study via online classes, I’ll resume mine after schools reopen.” pic.twitter.com/bwgVMCTkYI
— ANI (@ANI) October 29, 2020
ನನ್ನ ಸಹೋದರಿಯರು ಆನ್‍ಲೈನ್ ಮೂಲಕ ಶಿಕ್ಷಣ ಮುಂದುವರಿಸಿದ್ದಾರೆ. ನಾನು ಶಾಲೆಗಳು ಪುನರ್ ಆರಂಭವಾದ ಬಳಿಕ ಶಿಕ್ಷಣವನ್ನು ಮುಂದುವರಿಸುತ್ತೇನೆ ಎಂದು ಸುಭಾನ್ ಹೇಳಿದ್ದಾನೆ. ಸುಭಾನ್ ತಂದೆ 12 ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅಂದಿನಿಂದಲೇ ತಾಯಿಯವರು ಕುಟುಂಬವನ್ನು ನಡೆಸಿಕೊಂಡು ಬರುತ್ತಿದ್ದರು. ಸದ್ಯ ಶಾಲೆಗಳು ಮುಚ್ಚಿರುವ ಕಾರಣ ಕೆಲಸವನ್ನು ಕಳೆದುಕೊಂಡಿದ್ದಾರೆ.